‘ಆಂಜನೇಯ ಅವರನ್ನು ಸಿದ್ದರಾಮಯ್ಯ ತಳ್ಳುತ್ತಾರೆ, ಇದನ್ನು ನೋಡಿದ್ರೆ ಅಸ್ಪೃಶ್ಯತೆ ಎದ್ದು ಕಾಣುತ್ತೆ’

ಬಳ್ಳಾರಿ: ರಾಹುಲ್ ಬಂದ ಸಂದರ್ಭದಲ್ಲಿ ಎಚ್.ಆಂಜನೇಯ ಅವರನ್ನು ಕೈ ಹಿಡಿದು ಸಿದ್ದರಾಮಯ್ಯ ತಳ್ಳುತ್ತಾರೆ. ಅಹಿಂದ ನಾಯಕ ಅಂತ ಹೇಳಿ ಇಂತಹ ಕೆಲಸ ಮಾಜಿ ಸಿಎಂ ಮಾಡ್ತಾರೆ, ಇದನ್ನೆಲ್ಲ ನೋಡಿದ್ರೆ ಅಸ್ಪೃಶ್ಯತೆ ಎದ್ದು ಕಾಣುತ್ತದೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗುತ್ತೆ. ಸಿದ್ದರಾಮಯ್ಯನವರಿಗೆ ಅಹಂ ಅಹಂಕಾರ ಇದೆ. ಅವರ ಮುಂದಿನ ದಿನಗಳು ಬಹಳ ಕೆಟ್ಟದ್ದಾಗಿದೆ. ದೇವರು ಕಣ್ಣು ತೆರೆದರೆ ಇದು ಯಾವುದು ಉಳಿಯಲ್ಲ. ರಾಜ್ಯದಲ್ಲಿ ಸಿಎಂ ಹೆಚ್‌ಡಿಕೆ ಇದ್ದರೂ, ಸಿದ್ದರಾಮಯ್ಯ ಅವರೂ ಕೂಡ ಇಂದು ಸಿಎಂ ರೀತಿ ವರ್ತನೆ ಮಾಡ್ತಾರೆ. ಅದನ್ನು ಬಿಡಬೇಕು. ಯಾರದೋ ಹೆಗಲಮೇಲೆ ಬಂದೂಕು ಇಟ್ಟು ಶೂಟ್ ಮಾಡೋದನ್ನು ಸಿದ್ದರಾಮಯ್ಯ ಬಿಡಬೇಕು.ಸಿದ್ದರಾಮಯ್ಯಗೆ ಕೆಟ್ಟ ದಿನಗಳು, ಬರ್ತಿದೆ ಎಂದು ಶ್ರೀರಾಮುಲು ಹೇಳಿದರು.

ನಿನ್ನೆ ಮೊನ್ನೆ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲು ಪ್ರತಿ ಬೂತ್ ಗೆ ₹ 5 ಕೋಟಿ ಕೊಡ್ತಾರೆ. ಮಂಡ್ಯ ಜನ ಡಿಸೈಡ್ ಮಾಡಿದ್ದಾರೆ ಸುಮಲತಾ ಗೆಲುವು, ನಿಖಿಲ್ ಸೋಲು ಅಂತಾ. ರಾಜ್ಯದಲ್ಲಿ 24 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv