‘ಕೈ-ದಳ’ಪತಿಗಳು ‘ಕೇಸರಿ’ ಪಕ್ಷದ ಬಾಗಿಲಲ್ಲಿ?

ಬೆಂಗಳೂರು: ಕಾಂಗ್ರೆಸ್​ ಹಾಗೂ ಜೆಡಿಎಸ್​​ನ ಅತೃಪ್ತ ಶಾಸಕರು ಬಿಜೆಪಿ ಸೇರಲು ಉತ್ಸುಕರಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್​​. ಯಡಿಯೂರಪ್ಪ ಹೇಳಿದ್ದಾರೆ. ಮೈತ್ರಿ ಸರ್ಕಾರದ ಸಂಪುಟ ರಚನೆಯಾಗುತ್ತಿದ್ದಂತೆ, ಸಚಿವ ಸ್ಥಾನ ವಂಚಿತರಾದ ಆಕಾಂಕ್ಷಿಗಳು ಮುಸುಕಿನ ಗುದ್ದಾಟ ಆರಂಭಿಸಿದ್ದಾರೆ. ಹೀಗಾಗಿ, ಸ್ವ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಕೆಲವರು, ಕೇಸರಿ ಪಾರ್ಟಿಗೆ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ, ಅನ್ಯ ಪಕ್ಷದ ಅತೃಪ್ತರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕೂಡ ನಮ್ಮ ಕರ್ತವ್ಯ ಎಂದು ಮಾಜಿ ಸಿಎಂ ಬಿಎಸ್​ವೈ ಹೇಳಿದ್ದಾರೆ.

ಇನ್ನು, ಮೈತ್ರಿ ಸರ್ಕಾರ ಎಷ್ಟು ದಿನ ಆಡಳಿತ ನಡೆಸುತ್ತೆ ಅನ್ನೋದು ಮುಖ್ಯವಲ್ಲ. 104 ಶಾಸಕರ ಸಂಖ್ಯಾಬಲವಿದ್ದು ಸಿಂಗಲ್​​ ಲಾರ್ಜೆಸ್ಟ್​ ಪಾರ್ಟಿಯಾಗಿರುವ ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಬೇಕು. 2019 ರ ಮಹಾಚುನಾವನೆಗೆ ರೆಡಿಯಾಗಬೇಕು ಅಂತ ಬಿಎಸ್​​ವೈ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.