‘ದಾಖಲೆ ಪರಿಶೀಲಿಸಿ ಐಟಿ ದಾಳಿ ನಡೆಯುತ್ತೆ, ಸಿಎಂ ಎಚ್ಚರಿಕೆಯಿಂದ ಮಾತನಾಡಲಿ’

ಹುಬ್ಬಳ್ಳಿ: ದಾಖಲೆಗಳನ್ನು ಪರಿಶೀಲಿಸಿ ದಾಳಿ ನಡೆಯುತ್ತೆ. ಬಿಜೆಪಿಯ ಅನೇಕ ನಾಯಕರ ಮನೆ ಮೇಲೂ ಐಟಿ ದಾಳಿ ಆಗಿದೆ. ಆಗ ನಾವು ಬೀದಿಗಿಳಿದು ಹೋರಾಟ ಮಾಡಿಲ್ಲ‌. ಮುಖ್ಯಮಂತ್ರಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಬಿಎಸ್‌ವೈ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೋದಿಯವರ ‌ಭಾರತ ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಮೋದಿ ದೇಶದ ಅಭಿವೃದ್ಧಿಗೆ ಕಂಕಣಬದ್ಧರಾಗಿದ್ದಾರೆ.ಮೋದಿ ಅವರ ಅನೇಕ ಜನಪರ ಯೋಜನೆಗಳೇ ಸಾಕ್ಷಿ. ಪ್ರಣಾಳಿಕೆಯಲ್ಲಿ ನದಿ ಜೋಡಣೆಗಳಿಗೆ ಒತ್ತು ನೀಡಿದ್ದಾರೆ. ಸಿಎಂ ಪುಲ್ವಾಮ ದಾಳಿ ಬಗ್ಗೆ ಗೊತ್ತಿತ್ತು ಅಂತ ಹೇಳಿದ್ರು. ಇದು ನೈತಿಕ ಅಧಪತನದ ಪ್ರತೀಕ. ಮಾಧ್ಯಮದವರ ಮೇಲೆ ಹಲ್ಲೆಯಾದ್ರೆ ನಾನು ಹೊಣೆ ಅಲ್ಲ ಅಂದಿರೋದು ನಾಚಿಕೆಗೇಡು. ಮಂಡ್ಯ ಸೋಲಿನ ಭೀತಿಯಲ್ಲಿ ಡಿಸ್ಪಿರೇಟ್ ಆಗಿರುವ ಸಿಎಂ , ಏನೇನೋ ಮಾತಾಡ್ತಿದ್ದಾರೆ  ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದರು. 22 ಲೋಕಸಭಾ ಕ್ಷೇತ್ರದಲ್ಲೂ ನಾವು ಗೆಲುವು ಸಾಧಿಸುತ್ತೇವೆ. ದೋಸ್ತಿ ಸರ್ಕಾರ ಐಸಿಯುನಲ್ಲಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದೆ. ಇದ್ರಿಂದ ರಾಜ್ಯದ ಜನ ಒದ್ದಾಡುತ್ತಿದ್ದಾರೆ. ಕುಟುಂಬ ರಾಜಕಾರಣದಿಂದ ರಾಜ್ಯದ ಜನ ಬೇಸತ್ತಿದ್ದಾರೆ ಎಂದು ಬಿಎಸ್‌ವೈ ಕಿಡಿಕಾರಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv