15 ಸಾವಿರಕ್ಕಿಂತ ಹೆಚ್ಚು ಮತಗಳಿಂದ ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಬಿಎಸ್‌ವೈ

ಹುಬ್ಬಳ್ಳಿ: ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಹೊರಬರಲಿದೆ. 15 ಸಾವಿರಕ್ಕಿಂತ ಹೆಚ್ಚು ಮತಗಳಿಂದ ಎರಡೂ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಂಡ್ಯ ಸೇರಿ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮತದಾನ ಆಗುವವರೆಗೆ ಹುಬ್ಬಳ್ಳಿಯಲ್ಲೇ ಇದ್ದು ನಾಳೆ‌ ಹೊರಡುವೆ. ವೀರಶೈವ ಸಮುದಾಯದ ಶೇ. 5ರಷ್ಟು ಓಟು ಸಹ ಕಾಂಗ್ರೆಸ್‌ಗೆ ಬರುವುದಿಲ್ಲ. ವೀರೇಂದ್ರ ಪಾಟೀಲ್‌ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ ನಾನು ಹೇಳಲೇ ಬೇಕು. ವಾಸ್ತವಿಕ ಸತ್ಯ ಸಂಗತಿಯನ್ನ ಹೇಳಿದ್ದೇನೆ. ಇದು ತಪ್ಪಾ? ವೀರೇಂದ್ರ ಪಾಟೀಲ್‌ರನ್ನ ರಾಜೀನಾಮೆ ಕೊಡಿಸಿದಾಗ ನಾನೋಬ್ಬನೆ ಇದ್ದೆ. ರಾಜಶೇಖರ ಮೂರ್ತಿ ಮನೆಗೆ ಹೋದಾಗ ನಾನಿದ್ದೆ. ವೀರಶೈವ ಸಮಾಜಕ್ಕೆ ಈ ಸಂಗತಿಗಳು ತಿಳಿಯಬೇಕು ಎಂದು ಬಿಎಸ್‌ವೈ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv