‘ಪಾಕಿಸ್ತಾನ-ಭಾರತ ಸಂಘರ್ಷ ವಿಚಾರ 2 ವರ್ಷದ ಹಿಂದೆ ಸಿಎಂಗೆ ತಿಳಿದಿದ್ರೆ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು’

ಚಿಕ್ಕಮಗಳೂರು:  ಪ್ರಧಾನ ಮಂತ್ರಿಯವರನ್ನು ಸಿಎಂ ಎಲ್ಲೆಂದರಲ್ಲಿ ಟೀಕಿಸುತ್ತಿದ್ದಾರೆ. ಪಾಕಿಸ್ತಾನ- ಭಾರತ ಸಂಘರ್ಷ ವಿಚಾರ ಎರಡು ವರ್ಷದ ಹಿಂದೆ ತಿಳಿದಿತ್ತು ಎಂಬ ಸಿಎಂ ಹೇಳಿಕೆ ವಿಚಾರ ಕುರಿತು ಮಾತನಾಡಿ ನಿಜಕ್ಕೂ ನಿಮಗೆ ಗೊತ್ತಿದ್ರೆ ರಾಷ್ಟ್ರಪತಿಗಳಿಗೆ ತಿಳಿಸಬೇಕಿತ್ತು, ತಿಳಿಸದೇ ಇರುವುದು ರಾಷ್ಟ್ರ ದ್ರೋಹದ ಕೆಲಸ. 2014 ಕ್ಕೆ ಹೋಲಿಕೆ ಮಾಡಿದರೆ ಮೋದಿ ಅಲೆ ಈಗ ಹೆಚ್ಚಾಗಿದೆ. ಈ ಭಾರಿ 15 ರಿಂದ 20 ಪರ್ಸೆಂಟ್ ವೋಟ್ ಹೆಚ್ಚಾಗಲಿದ್ದು ಕರ್ನಾಟಕದಲ್ಲಿ ಕನಿಷ್ಟ 22 ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಲಿ ರೈತರ ಸಾಲ ಮನ್ನಾ ಮಾಡ್ತೀವಿ ಅಂದಿದ್ದರು ಆದರೆ ಒಂಭತ್ತು ತಿಂಗಳು ಕಳೆದ್ರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಕಿಡಿಕಾರಿದ್ರು. ಐಟಿ ರೈಡ್ ವಿಚಾರ ಸಂಬಂಧ ಸಿ ಎಂ ಆಪ್ತರ ಮನೆಯಲ್ಲಿದ್ದ ಹಣವನ್ನು ಬೇರೆ ಕಡೆ ತಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ ಐಟಿ ದಾಳಿಯ ವಿರುದ್ಧ ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದ್ದು‌ ದುರದೃಷ್ಟಕರ.  ರಾಜ್ಯದ ಅಭಿವೃದ್ದಿ ಐದು ವರ್ಷ ಹಿಂದೆ ಹೋದ ಆಗಿದೆ ತಂದೆ ಮಕ್ಕಳ ಚಿಂತೆ ಅವರ ಮೊಮ್ಮಕ್ಕಳು ಹಾಗೂ ಮಕ್ಕಳನ್ನು ಗೆಲ್ಲಿಸುವುದಾಗಿದೆ ರಾಜ್ಯದ ಅಭಿವೃದ್ದಿ ಬಗ್ಗೆ ಗಮನ ಇಲ್ಲ ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಮೈತ್ರಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಎರಡು ಲಕ್ಷ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ ಮಾಡುತ್ತಾ ಇದ್ದಾರೆ ಆದರೆ ದೇವೇಗೌಡ, ಸಿದ್ದರಾಮಯ್ಯ ಒಟ್ಟಿಗೆ ಹೆಲಿಕ್ಯಾಫ್ಟರ್ ನಲ್ಲಿ ಕೂತಿರುವಾಗ ಅಷ್ಟೇ ಅವರ ಸಂಬಂಧ ಕೆಳಗೆ ಇಳಿದ ಮೇಲೆ ಅದು ಇರುವುದಿಲ್ಲ. ಇದು ಮುಖಂಡರ ಮೈತ್ರಿಯೇ ಹೊರತು ಕಾರ್ಯಕರ್ತರ ಮೈತ್ರಿ ಅಲ್ಲ ಎಂದು ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ವ್ಯಂಗ್ಯ ಮಾಡಿದ್ರು..


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv