‘ಸಭಾಪತಿ ಮೇಲೆ ₹50 ಕೋಟಿ ಆರೋಪ ಹೊರೆಸಿ ಸಿಎಂ ಅಪರಾಧ ಮಾಡಿದ್ದಾರೆ’

ಬೆಂಗಳೂರು: ಸದನದ ಒಳಗಡೆ ಸ್ಪೀಕರ್ ರಮೇಶ್ ಕುಮಾರ್ ಅವರ ಜೊತೆ ಬಹಳ ಗೌರವದಿಂದ ನಡೆದುಕೊಂಡಿದ್ದೇವೆ. ಈ ಎಲ್ಲಾ ಘಟನೆಗಳಿಗೆ ಸಿಎಂ ಕುಮಾರಸ್ವಾಮಿ ಪ್ರೇರಣೆ ನೀಡಿ ಗೊಂದಲ ಸೃಷ್ಟಿ ಮಾಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಮೇಶ್ ಕುಮಾರ್ ಮೇಲೆ ₹50 ಕೋಟಿ ಹಣದ ಆರೋಪ ಹೊರೆಸಿ ಅಪಮಾನ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಈಗ ಇವರೇ ಎಸ್.ಐ.ಟಿ ತನಿಖೆ ಮಾಡಿಸೋದನ್ನ ನಾಡಿನ ಜನ ಒಪ್ಪಲ್ಲ. ತನಿಖೆಗೆ ನಾವು ಸಿದ್ಧವಿದ್ದೇವೆ. ನಾವೇನು ತನಿಖೆಯಿಂದ ಓಡಿ ಹೋಗ್ತಿಲ್ಲ. ತರಾತುರಿಯಲ್ಲಿ ತನಿಖೆ ಆಗೋದು ಬೇಕಾಗಿಲ್ಲ. ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿ ರಚಿಸಿ ತನಿಖೆ ಮಾಡಿ ಎಂದಿದ್ದೇವೆ. ನಾಳೆಯೂ ನಮ್ಮ ನಿಲುವಿಗೆ ಬದ್ಧ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv