ಸರ್ಕಾರ ವಿಸರ್ಜಿಸಿ ಬನ್ನಿ ಮತ್ತೇ ಚುನಾವಣೆಗೆ ಹೋಗೋಣ-ಯಡಿಯೂರಪ್ಪ

ಮೈಸೂರು: ಕುಮಾರಸ್ವಾಮಿ ಅಂಡ್ ಕಂಪನಿ ಏನಾಗಲಿದೆ ಅಂತ 15-20 ದಿನದಲ್ಲಿ ಗೊತ್ತಾಗಲಿದೆ. ಕುಮಾರಸ್ವಾಮಿ ನಿಮಗೆ ನೇರವಾಗಿ ಸವಾಲು ಹಾಕುತ್ತೇನೆ, ನಿಮ್ಮ ಸರ್ಕಾರ ವಿಸರ್ಜಿಸಿ ಬನ್ನಿ ಮತ್ತೇ ಚುನಾವಣೆಗೆ ಹೋಗೋಣ. ಯಾರು ಹೆಚ್ಚು ಸ್ಥಾನ ಗೆಲ್ತಾರೆ ಅಂತ ಗೊತ್ತಾಗತ್ತೆ ಎಂದು ಯಡಿಯೂರಪ್ಪ, ಕುಮಾರಸ್ವಾಮಿಗೆ ಬಹಿರಂಗ ಸವಾಲ್​ ಹಾಕಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಸಾಲಮನ್ನಾ ಮಾಡುತ್ತೇನೆ ಅಂತ ಹೇಳಿದವರು ನೀವೆ, ಆದರೆ ಇದೀಗ ರಾಜಕೀಯ ದೊಂಬರಾಟ ನಡೆಸುತ್ತಿದ್ದೀರಿ. ಈ ಬಗ್ಗೆ ಹಂತಹಂತವಾಗಿ ಸಿದ್ಧತೆ ಮಾಡಿಕೊಂಡು, ಮುಂದಿನ ದಿನಗಳಲ್ಲಿ ಹೋರಾಟ ನಡೆಸುತ್ತೇವೆ ಅಂತ ಎಚ್ಚರಿಕೆ ನೀಡಿದ್ರು.

ಅಪ್ಪ ಮಕ್ಕಳು ಇಬ್ಬರು ಸತ್ಯ ಹರಿಶ್ಚಂದ್ರರಂತೆ ವರ್ತನೆ ಮಾಡುತ್ತಿದ್ದೀರಾ?

ನಾನು ಹೆಲಿಕ್ಯಾಪ್ಟರ್ ಮೂಲಕ ಮಹಾಂತನಂದಾ ಸ್ವಾಮೀಜಿ ಅಂತಿಮ ದರ್ಶನಕ್ಕೆ ಹೋಗಿದ್ದೆ. ಇದಕ್ಕಾಗಿ ಸ್ವತಃ ರಾಜ್ಯಪಾಲರ ಅನುಮತಿಯನ್ನು ಪಡೆದುಕೊಂಡು‌ ಹೋಗಿದ್ದೆ. ಆದರೆ ಇದನ್ನ ನೀವು ಪದೇ‌ ಪದೆ ಈ ಹಣಕ್ಕೆ ಹೊಣೆ ಯಾರು? ಅಂತ ಪ್ರಶ್ನಿಸುತ್ತೀರಿ. ಹೆಲಿಕ್ಯಾಪ್ಟರ್​ನಲ್ಲಿ ತಿರುಗಾಡಿದ್ದ ಬಗ್ಗೆ ನನಗೆ ಯಾಕೆ ನೀವು ಕೇಳುತ್ತೀರಿ? ಅಂತ ಕುಮಾರಸ್ವಾಮಿಗೆ ಮರುಪ್ರಶ್ನೆ ಕೇಳಿದ ಯಡಿಯೂರಪ್ಪ ಕುಮಾರಸ್ವಾಮಿ ಅವರೇ ಈ‌ ಮಾತನ್ನ ನಿಮ್ಮ ಕಾರ್ಯದರ್ಶಿಗಳಿಗೆ ಕೇಳಬೇಕು ಎಂದರು.
ಇನ್ನು ಈ ಬಗ್ಗೆ ನೇರವಾದ ಬಹಿರಂಗ ಪತ್ರ ಬರೆಯುತ್ತೇನೆ. ಅಪ್ಪ ಮಕ್ಕಳು ಇಬ್ಬರು ಸತ್ಯ ಹರಿಶ್ಚಂದ್ರರಂತೆ ವರ್ತನೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಅಲ್ಲದೇ, ಬೇಕಿದ್ದರೆ ನಾನು ಓಡಾಟ ಮಾಡಿದ ಖರ್ಚನ್ನು ನಾನೇ ಭರಿಸುತ್ತೇನೆ. ಇದನ್ನ ಕೂಡ ಪತ್ರದಲ್ಲಿ ಉಲ್ಲೇಖಿಸುತ್ತೇನೆ ಅಂತ ಯಡಿಯೂರಪ್ಪ ಸ್ಪಷ್ಟಪಡಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv