‘ಮಲ್ಲಿಕಾರ್ಜುನ ಖರ್ಗೆ ಹಿರಿಯರು, ಜವಾಬ್ದಾರಿಯಿಂದ ಮಾತನಾಡಬೇಕು’

ಕಲಬುರ್ಗಿ: ಮಲ್ಲಿಕಾರ್ಜುನ ಖರ್ಗೆ ಹಿರಿಯರಿದ್ದಾರೆ, ಅವರು ಜವಾಬ್ದಾರಿಯಿಂದ ಮಾತನಾಡೋದನ್ನು ಕಲಿಯಬೇಕು ಅಂತಾ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯವರ ಕುತಂತ್ರದಿಂದ ಚಿಂಚೋಳಿ ಉಪಚುನಾವಣೆ ಬಂದಿದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಫಸ್ಟ್ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಸೋಲ್ತಾರೆ. ಡಾ.ಉಮೇಶ್ ಜಾಧವ್ ಗೆಲ್ಲೋರಿದ್ದಾರೆ. ರಾಜ್ಯದಲ್ಲಿ 22ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಮೇ 23ರ ಫಲಿತಾಂಶದ ಬಳಿಕ ರಾಜಕೀಯದಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತೆ. ಮೋದಿ ಅವರು ಮತ್ತೆ ಪ್ರಧಾನಿ ಆಗ್ತಾರೆ. ಅದರ ಜೊತೆಗೆ ಇಲ್ಲಿನ ಸರ್ಕಾರ ಬದಲಾಗುವ ಸಂಭವವಿದೆ ಅಂತಾ ಬಿಎಸ್​ವೈ ಭವಿಷ್ಯ ನುಡಿದ್ರು.

ಇದೇ ವೇಳೆ, ಚಿಂಚೋಳಿ, ಕುಂದಗೋಳ ಎರಡೂ ಕ್ಷೇತ್ರಗಳಲ್ಲೂ ನಾವು ಗೆಲ್ತೇವೆ. ಕಳೆದ ಎರಡು ದಿನಗಳಿಂದ 50,000 ಜನರ ಜೊತೆ ಮಾತನಾಡಿದ್ದೇನೆ. ಆ ಎಲ್ಲಾ ಜನ  ಸಭೆಯಲ್ಲಿ ನಿಂತು ಜಾಧವ್‌ರನ್ನು ಗೆಲ್ಲಿಸುತ್ತೇವೆ ಅಂತಿದ್ದಾರೆ. ಇದನ್ನ ನೋಡಿದ್ರೆ, ನಾವು 20 ಸಾವಿರ ಮತಗಳ ಅಂತರದಿಂದ  ಗೆಲ್ಲೋದು ಗ್ಯಾರೆಂಟಿ ಅನ್ನೋ ವಿಶ್ವಾಸ ವ್ಯಕ್ತಪಡಿಸಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv