ಮತದಾರರನ್ನು ದ್ರೋಹಿ ಎಂದು ಕಣ್ಣೀರಿಟ್ಟರು: ಆಜಂಖಾನ್​

ದೆಹಲಿ: ತಮ್ಮ ಅಸಂಬದ್ಧ ಹೇಳಿಕೆಗಳಿಂದ ಸುದ್ದಿಯಾಗಿದ್ದ ಆಜಂಖಾನ್​ ಇದೀಗ ಅದೇ ವಿವಾದಗಳಿಂದ ಕಣ್ಣೀರುಹಾಕುತ್ತಿದ್ದಾರಾ? ನಿನ್ನೆ ಭಾಷಣದಲ್ಲಿ ಅವರು ಹಾಕಿರೋ ಕಣ್ಣೀರು ಈ ಪ್ರಶ್ನೆಗೆ ಕಾರಣವಾಗಿದೆ. ರಾಮಪುರದ ಱಲಿಯೊಂದರಲ್ಲಿ ಮಾತನಾಡಿದ ಅವರು, ನಾನು ನಿಮ್ಮ ಮುಂದೇ ಏನನ್ನು ಹೇಳಿ ಹೋಗಿದ್ದೇನೋ? ಇವತ್ತು ಅದಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ. ನನ್ನನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂದರೇ, ಭಯೋತ್ಪಾದಕನಂತೆ ನೋಡುತ್ತಿದ್ದಾರೆ. ನನ್ನನ್ನ ಡಕಾಯಿತನಂತೆ ನಡೆಸಿಕೊಳ್ಳುತ್ತಿದ್ದಾರೆ. ನನ್ನ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿತ್ತು ಎಂದಿದ್ದಾರೆ.
ಇನ್ನು ಸಿಟ್ಟನ್ನ ಹೊರಹಾಕುತ್ತಲೇ ನನ್ನ ಮನೆ ಬಾಗಿಲಿಗೆ ಕಲ್ಲು ಹೊಡೆಯಿರಿ, ನನ್ನ ಮೇಲೆ ಗುಂಡಿನ ದಾಳಿ ನಡೆಸಿ, ಯಾಕೆಂದರೆ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಿಲ್ಲ ಎಂದಿದ್ದಾರೆ. ನನಗೆ ಆಸ್ತಿಪಾಸ್ತಿ ಇಲ್ಲ, ಜನಬಲ ಇಲ್ಲ, ಕುಟುಂಬದ ಬಲ ಇಲ್ಲ ಎಂದು ಗಳಗಳನೇ ಅತ್ತಿದ್ದಾರೆ. ಜೊತೆಯಲ್ಲಿ 23 ನೇ ತಾರೀಖಿನವರೆಗೂ ನಾನು ಬದುಕಿದ್ದರೇ ನಾನು ಮುಂದೆಯು ಬದುಕುತ್ತೇನೆ. ಆರುವ ಮುನ್ನ ಜೋರಾಗಿ ಉರಿಯುವ ದೀಪ ನಾನು ಎಂದಿದ್ದಾರೆ.
ಹೀಗೆ ಗಳಗಳನೇ ಅತ್ತ ಆಜಂಖಾನ್​ ಈ ಮೊದಲು ರಾಮಪುರಿಯಲ್ಲಿ ದೇಶದ ಮತದಾರರನ್ನೇ ದ್ರೋಹಿಗಳು ಎಂದಿದ್ದರು. ಅದಕ್ಕೋ ಕೆಲದಿನಗಳ ಹಿಂದೇ ಜಯಪ್ರದಾರ ವಿರುದ್ಧ ಅಸಭ್ಯವಾದ ಹೇಳಿಕೆಯನ್ನು ನೀಡಿದ್ದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv