ಕೂದಲು ಉದುರುವಿಕೆ ತಡೆಯಲು ಇಲ್ಲಿದೆ ಆಯುರ್ವೇದಿಕ್​ ಪರಿಹಾರ

ಕೂದಲು ಉದುರುವಿಕೆ ಪ್ರತಿಯೊಬ್ಬರಲ್ಲೂ ಕಂಡುಬರುವ ಸಮಸ್ಯೆ. ಹಾರ್ಮೊನ್ ಅಸಮತೋಲನ, ಪೋಷಕಾಂಶಗಳ ಕೊರತೆ, ನೆತ್ತಿಯಲ್ಲಿನ ಕಡಿಮೆ ರಕ್ತ ಸಂಚಲನೆ, ತೀವ್ರವಾದ ದೈಹಿಕ ಒತ್ತಡ ಮತ್ತು ಮಾನಸಿಕ ಒತ್ತಡ ಕೂದಲು ಉದುರುವಿಕೆಗೆ ಕಾರಣವಾಗಬಹುದು. ದೈಹಿಕ ಒತ್ತಡ ಎಂದರೆ ಹೆರಿಗೆ, ಶಸ್ತ್ರಚಿಕಿತ್ಸೆ ಹಾಗೂ ಪ್ರಸವದ ನಂತರದ ಹಲವಾರು ತಿಂಗಳುಗಳ ಕಾಲ ಕೂದಲು ಉದುರುವಿಕೆ ಇರಬಹುದು. ತೀವ್ರವಾದ ಮಾನಸಿಕ ಒತ್ತಡ, ಭಯ, ಆತಂಕ ಕೂಡಾ ಹೇರ್​ಫಾಲ್​​ಗೆ ಕಾರಣವಾಗುತ್ತದೆ.

ಆದರೆ ಕೂದಲಿಗೆ ಸೂಕ್ತವಾದ ಚಿಕಿತ್ಸೆ ನೀಡಿದ್ರೆ ಕೂದಲು ಉದುರುವುದನ್ನ ತಡೆಯಬಹುದು

1. ಆಯುರ್ವೇದದ ಪ್ರಕಾರ, ಪಿತ್ತ ದೋಷದ ಅಸಮತೋಲನವೂ ಕೂಡಾ ಕೂದಲು ಉದುರಲು ಕಾರಣವಾಗುತ್ತದೆ. ಒಂದು ವೇಳೆ ಪಿತ್ತ ದೋಷದ ಸಮಸ್ಯೆ ಇದೆ ಎಂದಾದಲ್ಲಿ ಮಜ್ಜಿಗೆ, ತೆಂಗಿನ ಎಣ್ಣೆ ಮತ್ತು ದಾಲ್ಚಿನ್ನಿ ಮುಂತಾದ ಹೆಚ್ಚು ತಂಪಾದ ಮತ್ತು ಸುಲಭ ಆಹಾರಗಳನ್ನು ಸೇವಿಸುವುದು ಒಳಿತು. ಇನ್ನು ಕಲ್ಲಂಗಡಿ ಹಣ್ಣು ಮತ್ತು ದ್ರಾಕ್ಷಿಯಂತಹ ಹಣ್ಣುಗಳು ನಿಮ್ಮ ಕೂದಲನ್ನು ಬಲವಾಗಿಡಲು ಸಹಾಯ ಮಾಡುತ್ತವೆ.

2. ಕೂದಲ ಆರೋಗ್ಯವನ್ನು ಹೆಚ್ಚಿಸಲು ಭೃಂಗರಾಜ್ ತೈಲ ಅತ್ಯಂತ ವಿಶ್ವಾಸಾರ್ಹ ಮತ್ತು ಹಳೆಯ ಆಯುರ್ವೇದ ಪರಿಹಾರ. ಇದನ್ನು ಗಿಡಮೂಲಿಕೆಗಳ ರಾಜ ಎಂದು ಕೂಡ ಕರೆಯಲಾಗುತ್ತದೆ, ಭೃಂಗರಾಜ ಕೂದಲು ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ ಕೂದಲು ಉದುರುವುದನ್ನ ತಡೆಗಟ್ಟುತ್ತದೆ.

3.ಮೊಸರು ಕೂದಲಿಗೆ ತಂಪಾದ ಅನುಭವವನ್ನ ನೀಡುತ್ತದೆ ಮತ್ತು ಇದರಲ್ಲಿರುವ ಪ್ರೊಟೀನ್​ ನಿಮ್ಮ ನೆತ್ತಿಯ ಆರೋಗ್ಯ ಮತ್ತು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಹೊಸ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಕೂದಲಿಗೆ ಮೊಸರು ಹಚ್ಚಿ, ಮಸಾಜ್​ ಮಾಡಿ 15 ನಿಮಿಷ ಬಿಟ್ಟು ಮೃದುವಾದ ಶ್ಯಾಂಪೂವಿನಿಂದ ಸ್ನಾನ ಮಾಡಿ. ಮೊಸರು ಹಚ್ಚುವುದರಿಂದ ಕೂದಲು ಮೃದುವಾಗಿ ಮತ್ತು ಬೌನ್ಸಿಯಾಗಿ ಕಾಣುತ್ತದೆ.

4. ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳಲ್ಲಿ ವಿಟಮಿನ್​ ಸಿ ಕೊರತೆ ಕೂಡಾ ಒಂದು. ಬೆಟ್ಟದ ನೆಲ್ಲಿಕಾಯಿ ವಿಟಮಿನ್ ‘ಸಿ’ಯಿಂದ ಸಮೃದ್ಧವಾಗಿದೆ. ನೆಲ್ಲಿಕಾಯಿ ಕೂದಲು ಉದುರುವುದು ಮತ್ತು ತಲೆ ಹೊಟ್ಟು ಸಮಸ್ಯೆಗೂ ಪರಿಹಾರ ಒದಗಿಸುತ್ತದೆ. ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಎರಡು ಟೀ ಚಮಚ ನೆಲ್ಲಿಕಾಯಿ ಪುಡಿ ಸೇರಿಸಿ. ಕಂದು ಬಣ್ಣ ಬರುವವರೆಗೂ ಬಿಸಿ ಮಾಡಿ. ಎಣ್ಣೆ ತಣ್ಣಗಾದ ನಂತರ ತಲೆಗೆ ಹಚ್ಚಿ ಮೃದುವಾಗಿ ಮಸಾಜ್​ ಮಾಡಿ. ಸ್ವಲ್ಪ ಸಮಯದ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

 

6. ಮೆಂತ್ಯೆ ಬೀಜಗಳಲ್ಲಿ ಫೋಲಿಕ್ ಆ್ಯಸಿಡ್​, ವಿಟಮಿನ್ ಎ, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಹೆಚ್ಚಾಗಿದೆ.  ಇವೆಲ್ಲವೂ ಆರೋಗ್ಯಕರ ಮತ್ತು ಬಲಶಾಲಿಯಾದ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದರಲ್ಲಿ ಪ್ರೋಟೀನ್ ಮತ್ತು ನಿಕೋಟಿಕ್​ ಆ್ಯಸಿಡ್​ ಅಂಶವು ಹೆಚ್ಚಾಗಿದ್ದು, ಕೂದಲಿನ ಬುಡವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ನೀವು ಸೇವಿಸುವ ಆಹಾರದಲ್ಲಿ ಮೆಂತ್ಯೆ ಸೇರಿಸುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯಕಾರಿ. ರಾತ್ರಿ ಮೆಂತ್ಯ ಬೀಜವನ್ನ ನೀರಿನಲ್ಲಿ ನೆನೆಸಿ, ಮರು ದಿನ ಬೆಳಗ್ಗೆ ಮೆಂತ್ಯದ ನೀರು ಕುಡಿಯಿರಿ. ಅಥವಾ ಈ ನೆನೆಸಿದ ಬೀಜಗಳನ್ನು ಪೇಸ್ಟ್​ ಮಾಡಿಕೊಂಡು ತಲೆಗೆ ಹಚ್ಚಿ,  20 ನಿಮಿಷಗಳ ಕಾಲ  ಬಿಟ್ಟು ತೊಳೆಯಿರಿ.