ಬಿಳಿ ಮಚ್ಚೆ ಕುರಿತು ಜಾಗೃತಿ ಅಭಿಯಾನ

ಚಿತ್ರದುರ್ಗ: ಬಿಳಿ ಮಚ್ಚೆ ಇದೊಂದು ಚರ್ಮಕ್ಕೆ ಸಂಬಂಧಿಸಿದ ರೋಗ. ಇದು ಶಾಪವಲ್ಲ ಬಿಳಿ ಮಚ್ಚೆಯನ್ನು ಸೂಕ್ತ ಚಿಕಿತ್ಸೆಯಿಂದ ನಿರ್ಮೂಲನೆ ಮಾಡಬಹುದು ಎಂದು ಚಿತ್ರದುರ್ಗದಲ್ಲಿ ಜಾಗೃತಿ ಮೂಡಿಸಲಾಯಿತು. ಭಾರತೀಯ ಚರ್ಮರೋಗ ಮತ್ತು ಕುಷ್ಠರೋಗ ತಜ್ಞರ ಸಂಘದಿಂದ ಬಿಳಿ ಮಚ್ಚೆ ಕುರಿತು ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು.
ನಗರದ ಮಹಾತ್ಮಗಾಂಧಿ ವೃತ್ತದಿಂದ ಆರಂಭವಾದ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಾಗೃತಿ ಅಭಿಯಾನದಲ್ಲಿ ಎಲ್​ಸಿಡಿ ಡಿಸ್​​ಪ್ಲೇ ಮೂಲಕ ಜನಭರಿತ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಯಿತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv