‘ಅವೆಂಜರ್ಸ್ ಎಂಡ್​ಗೇಮ್’ ಟಿಕೆಟ್ ಸೋಲ್ಡ್ ಔಟ್..!

ಜಗತ್ತಿನಾದ್ಯಂತ ಸೈನ್ಸ್ ಫಿಕ್ಷನ್ ಮೂವೀಸ್ ಪ್ರಿಯರು ಭಾರೀ ನಿರೀಕ್ಷೆಯಿಂದ ಕಾಯ್ತಾ ಇದ್ದಿದ್ದು ‘ಅವೆಂಜರ್ಸ್​ ಎಂಡ್​ಗೇಮ್​’ಗಾಗಿ. ಅವೆಂಜರ್ಸ್ ಸೀರೀಸ್​ನ ಕೊನೆ ಚಿತ್ರ ಇದಾಗಿದ್ದು, ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ನಿನ್ನೆಯೇ ಚಿತ್ರ ಜಗತ್ತಿನಾದ್ಯಂತ ರಿಲೀಸ್ ಆಗಿದೆ. ಭಾರತದಲ್ಲೂ ಇಂದು ಸಿನಿಮಾ ತೆರೆ ಕಾಣುತ್ತಿದ್ದು, ‘ಅವೆಂಜರ್ಸ್’ ಫ್ಯಾನ್ಸ್ ಚಿತ್ರ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.
ರಿಲೀಸ್ ಆದ ಮೊದಲ ದಿನವೇ ವಿಶ್ವದಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ ‘ಅವೆಂಜರ್ಸ್ ಎಂಡ್ ಗೇಮ್’ ಧೂಳೆಬ್ಬಿಸುತ್ತಿದೆ. ಸಿನಿ ಪ್ರಿಯರು ಈ ಸೀರೀಸ್​​ಗೆ ಅದ್ಧೂರಿ ಬೀಳ್ಕೊಡುಗೆಯನ್ನೇ ನೀಡ್ತಿದ್ದಾರೆ.

ಮೊದಲ ದಿನ ಜಗತ್ತಿನಾದ್ಯಂತ ಒಟ್ಟು 1,186 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು, ಚೀನಾ ಒಂದರಲ್ಲೇ ಬರೊಬ್ಬರಿ 754 ಕೋಟಿ ರೂಪಾಯಿಯನ್ನ ‘ಎಂಡ್ ಗೇಮ್’ ಬಾಚಿಕೊಂಡಿದೆ.
​ಇವತ್ತು ಭಾರತದಲ್ಲೂ ಇಂಗ್ಲೀಷ್, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ರಿಲೀಸ್ ಆಗ್ತಿದೆ. ಈಗಾಗಲೇ ದೇಶದೆಲ್ಲೆಡೆ ಸಿನಿಮಾದ ಮೊದಲ ಶೋ ಟಿಕೆಟ್​ಗಳು ಸೋಲ್ಡ್ ಔಟ್ ಆಗಿವೆಯಂತೆ. ಭಾರತದಲ್ಲಿ ಸಿನಿಮಾದ ಕ್ರೇಜ್ ಅದೆಷ್ಟಿದೆ ಅಂದ್ರೆ, ಪ್ರತಿ 18 ಸೆಕೆಂಡ್​ಗೆ ಒಂದು ಟಿಕೆಟ್ ಸೇಲ್ ಆಗಿದ್ದು, ಪ್ರೀ ಬುಕ್ಕಿಂಗ್​ನಲ್ಲಿ ನಿನ್ನೆವರೆಗೂ ಒಟ್ಟಾರೆಯಾಗಿ 2.5 ಮಿಲಿಯನ್ ಅಂದ್ರೆ 25 ಲಕ್ಷ ಟಿಕೆಟ್​ಗಳು ಮಾರಾಟವಾಗಿವೆಯಂತೆ. ಇಲ್ಲಿವರೆಗೂ ಈ ದಾಖಲೆ ಬಾಹುಬಲಿ-2 ಸಿನಿಮಾ ಹೆಸರಲ್ಲಿದೆ. 2017ರಲ್ಲಿ ಬಾಹುಬಲಿ 2 ರಿಲೀಸ್​ಗೂ ಮೊದಲು 3.3 ಮಿಲಿಯನ್ ಅಂದ್ರೆ 33 ಲಕ್ಷ ಟಿಕೆಟ್​ಗಳು ಮುಂಗಡವಾಗಿಯೇ ಸೇಲ್ ಆಗಿದ್ದವು. ಇವತ್ತು ಸಿನಿಮಾ ರಿಲೀಸ್ ಆಗೋ ಮೊದಲು ಸಿಗುವ ಲೆಕ್ಕವನ್ನ ತೆಗೆದುಕೊಂಡ್ರೆ, ಬಾಹುಬಲಿಯ ರೆಕಾರ್ಡ್ ಅನ್ನ ಅವೆಂಜರ್ಸ್ ಎಂಡ್ ಗೇಮ್ ಚಿಂದಿ ಮಾಡುವ ಸಾಧ್ಯತೆ ಇದೆ ಅಂತ ಆನ್​ಲೈನ್ ಟಿಕೆಟ್ ಬುಕ್ಕಿಂಗ್ ಸಂಸ್ಥೆಯೊಂದು ಹೇಳಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv