ರೈತರ ಸಾಲ ಮನ್ನಾ ಮಾಡಲು ನಮ್ಮ ಹಣ ಬೇಕಾ..? ಆಟೋ ರಿಕ್ಷಾ ಚಾಲಕರ ಆಕ್ರೋಶ!

ಬೆಂಗಳೂರು: ಆಟೋ ರಿಕ್ಷಾಗಳ ಮೇಲೆ ಆಡುಗೋಡಿ ಸಂಚಾರೀ ಪೊಲೀಸರು ರೇಡ್​ ನಡೆಸಿದ್ದು, ನಿಯಮ ಉಲ್ಲಂಘಿಸಿದ ಆಟೋ ರಿಕ್ಷಾಗಳಿಗೆ ದಂಡ ವಿಧಿಸಿದ್ದಾರೆ. ಈ ಸಂಬಂಧ ಆಡುಗೋಡಿ ಸಂಚಾರೀ ಪೊಲೀಸರು, ನಿಯಮ ಉಲ್ಲಂಘನೆ ಹಿನ್ನಲೆಯಲ್ಲಿ ಎರಡೇ ದಿನದಲ್ಲಿ 200 ಆಟೋ ರಿಕ್ಷಾಗಳ ಮೇಲೆ ಒಟ್ಟು 800 ಕೇಸ್​ಗಳನ್ನು ದಾಖಲಿದ್ದಾರೆ.

ಇನ್ನು ಕೇಸ್ ದಾಖಲಿಸಿರುವುದಕ್ಕೆ ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ಇಲ್ಲದ ಸ್ಪೆಷಲ್ ರೇಡ್ ಈಗ ಏಕೆ..? ನಮ್ಮ ಹಣದಲ್ಲಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಬೇಕಾ..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪೊಲೀಸರು ದಂಡ ಕೇಳುವ ನೆಪದಲ್ಲಿ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv