ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಶ್ರಮಿಸುತ್ತೇನೆ: ಡಿ. ಕೃಷ್ಣಪ್ಪ

ಶಿವಮೊಗ್ಗ: ಆಟೋ ಚಾಲಕರು ಮತ್ತು ಮಾಲೀಕರಿಗೆ ಯಾವುದೇ ತೊಂದರೆ ಬಂದಾಗ ಅವರ ಸಹಾಯಕ್ಕಾಗಿ ವೇದಿಕೆಯ ಅಗತ್ಯವಿದೆ ಎಂದು ಸ್ಮಾರ್ಟ್​​ ಸಿಟಿ ಆಟೋ ಚಾಲಕ ಮತ್ತ ಮಾಲೀಕರ ಸಂಘದ ಅಧ್ಯಕ್ಷ ಡಿ. ಕೃಷ್ಣಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಟೋ ಚಾಲಕರಿಗೆ ಮತ್ತು ಮಾಲೀಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಮಾಡಲಾಗುವುದು. ಸಂಘದ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದರು.
ಈಗಾಗಲೇ ಇರುವ ಆಟೋ ಚಾಲಕ ಮತ್ತು ಮಾಲೀಕರ ಸಂಘದಿಂದ ನಮಗೆ ಯಾವುದೇ ಪ್ರಯೋಜನ ಆಗುತಿಲ್ಲ. ಹಾಗಾಗಿ ಸಮಾನ ಮನಸ್ಕರೆಲ್ಲರೂ ಸೇರಿ ಹೊಸದಾಗಿ ಸಂಘ ಸ್ಥಾಪಿಸಿಕೊಂಡಿದ್ದೇವೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv