8 ವರ್ಷಗಳ ಕಾರ್ಯಾಚರಣೆ: ಕೊನೆಗೂ ಸಿಕ್ಕೇಬಿಡ್ತು 600 ಕೆಜಿ ತೂಕದ ಮೊಸಳೆ

ಆಸ್ಟ್ರೇಲಿಯಾದ ಕಟೇರಿಯನ್ ಟೌನ್​​ನಲ್ಲಿ ಬರೋಬ್ಬರಿ 600 ಕೆಜಿ ತೂಕದ ಮೊಸಳೆಯೊಂದನ್ನ ಸೆರೆಹಿಡಿಯಲಾಗಿದೆ. ಕಟೇರಿಯನ್ ನದಿಯಲ್ಲಿ ಈ ಮೊಸಳೆ 8 ವರ್ಷಗಳ ಹಿಂದೆ ಅಂದ್ರೆ 2010ರಲ್ಲಿ ಕಾಣಿಸಿಕೊಂಡಿತ್ತು. ಅಂದಿನಿಂದ ಅಲ್ಲಿನ ವೈಲ್ಡ್​ಲೈಫ್ ಅಧಿಕಾರಿಗಳು ಮೊಸಳೆಯನ್ನ ಸೆರೆ ಹಿಡಿಯಲು ಬಲೆ ಬೀಸಿದ್ದರು. ಆದರೆ ಈ ಮೊಸಳೆ ಸಸತ 8 ವರ್ಷಗಳ ಕಾಲ ಯಾರಿಗೂ ಸಿಗದೇ ನದಿಯಲ್ಲಿ ಇತ್ತು.

600 ಕೆ.ಜಿ. ತುಗುವ ಈ ಮೊಸಳೆಗೆ ಸುಮಾರು 60 ವರ್ಷ ವಯಸ್ಸಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 4.7 ಉದ್ದ ಇರುವ ಮೊಸಳೆಯನ್ನ ಹರಸಾಹಸ ಮಾಡಿ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಈ ಮೊಸಳೆ ಕಟೇರಿಯನ್ ನದಿಯಲ್ಲಿರುವ ಎಲ್ಲಾ ಮೊಸಳೆಗಳಿಗಿಂತ ದೊಡ್ಡದಾಗಿದೆ. ಇದನ್ನ ಸೆರೆ ಹಿಡಿಯಲು ಸಿಕ್ಕಾಪಟ್ಟೆ ಪ್ರಯತ್ನ ನಡೆಸಲಾಗಿತ್ತು. ಕೊನೆಗೂ ದೈತ್ಯ ಮೊಸಳೆಯನ್ನ ಸೆರೆ ಹಿಡಿದಿದ್ದೇವೆ ಎಂದು ವೈಲ್ಡ್​​ಲೈಫ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಟೇರಿಯನ್ ನದಿಯಲ್ಲಿ ಮಸಳೆಗಳ ಸಂಖ್ಯೆ ಹೆಚ್ಚಿದ್ಯಂತೆ. ಪ್ರತಿವರ್ಷ 250ಕ್ಕೂ ಹೆಚ್ಚು ಮೊಸಳೆಗಳು ವಿವಿಧ ತೊಂದರೆಗಳಿಂದ ಬಳಲುತ್ತಿವೆಯಂತೆ. ಹೀಗಾಗಿ ಇಲ್ಲಿರುವ ಮೊಸಳೆಗಳನ್ನ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಿ ಅವುಗಳನ್ನ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv