10 ಸಾವಿರ ರನ್​ ಹೊಸ್ತಿಲಲ್ಲಿ, ಮಹೇಂದ್ರ ಸಿಂಗ್​ ಧೋನಿ..!

ಟೀಮ್​ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ, ಆಸಿಸ್​ ನೆಲದಲ್ಲಿ ಮಹತ್ವದ ದಾಖಲೆ ನಿರ್ಮಿಸುವುದಕ್ಕೆ ಸಜ್ಜಾಗಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಗಡಿ ಮುಟ್ಟುವುದಕ್ಕೆ ಇನ್ನೂ ಕೇವಲ 1 ರನ್​ಗಳ ಅವಶ್ಯಕತೆ ಇದ್ದು, ಸಿಡ್ನಿ ಮೈದಾನ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ. ನಾಳೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು, ಸಿಡ್ನಿಯಲ್ಲಿ ಆರಂಭವಾಗಲಿರುವ ಮೊದಲ ಹೋರಾಟಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಈ ನಡುವೆ ಭಾರತ ಪರ 9999 ರನ್ ಕಲೆಹಾಕಿರುವ ಮಾಹಿ, ಆಸಿಸ್​ ನೆಲದಲ್ಲಿ ಮೊದಲ ರನ್​ ಗಳಿಸುವ ಮೂಲಕ ಹೊಸ ಮೈಲುಗಲ್ಲು ನಿರ್ಮಿಸುವುದಕ್ಕೆ ತಯಾರಾಗಿದ್ದಾರೆ. ಒಟ್ಟಾರೆ ಏಕದಿನ ಕ್ರಿಕೆಟ್​​ನಲ್ಲಿ 10173 ರನ್ ಕಲೆಹಾಕಿರುವ ಮಾಹಿ, ಭಾರತದ ಪರ 10 ಸಾವಿರ ರನ್​ ಗಡಿ ದಾಟುವುದಕ್ಕೆ ಒಂದು ರನ್​ ಬೇಕಿದೆ. ಬಾಕಿ 174 ರನ್​​ಗಳನ್ನ ಮಾಹಿ ವಿಶ್ವ ಇಲೆವೆನ್​ ಮತ್ತು ಏಷ್ಯಾ ತಂಡಗಳ ಪರ ಗಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv