ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ, ವಾರ್ನರ್​- ಸ್ಮಿತ್​ ಕಮ್​ಬ್ಯಾಕ್​..!

ವಿಶ್ವಕಪ್​ ಟೂರ್ನಿಗಾಗಿ ಆಸ್ಟ್ರೇಲಿಯಾ ತಂಡವನ್ನ ಆಯ್ಕೆ ಮಾಡಲಾಗಿದೆ. 15 ಆಟಗಾರರ ತಂಡವನ್ನ ಪ್ರಕಟಿಸಲಾಗಿದ್ದು, ಆರೊನ್ ಫಿಂಚ್​​ಗೆ ನಾಯಕನ ಪಟ್ಟ ನೀಡಲಾಗಿದೆ. ಬಾಲ್​ ಟ್ಯಾಂಪರಿಂಗ್​​ ಮಾಡಿ 1 ವರ್ಷ ನಿಷೇಧಕ್ಕೊಳಗಾಗಿದ್ದ ಮಾಜಿ ನಾಯಕ ಸ್ಟೀವನ್ ಸ್ಮಿತ್, ಓಪನರ್​ ಬ್ಯಾಟ್ಸ್​​ಮನ್ ಡೇವಿಡ್​ ವಾರ್ನರ್​ ತಂಡಕ್ಕೆ ಮರಳಿದ್ದಾರೆ. ಆದ್ರೆ ವೇಗಿ ಜೋಶ್ ಹೆಜಲ್​ವುಡ್, ಇನ್​ಫಾರ್ಮ್​ ಬ್ಯಾಟ್ಸ್​​​ಮನ್​ ಪೀಟರ್​ ಹ್ಯಾಂಡ್ಸ್​ಕೋಂಬ್​ ಅವರನ್ನ ತಂಡದಿಂದ ಕೈಬಿಡಲಾಗಿದೆ. ಉಸ್ಮಾನ್​ ಖ್ವಾಜಾ, ಮಾರ್ಕಸ್​​ ಸ್ಟೋಯಿನಿಸ್​, ಶಾನ್​ ಮಾರ್ಷ್​, ವೇಗದ ಬೌಲರ್ ಜೇಯ್ ರಿಚರ್ಡ್​​ಸನ್, ಸ್ಪಿನ್ನರ್ ಆ್ಯಡಮ್​ ಜಂಪಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಹೀಗಿದೆ: ಆರೊನ್ ಫಿಂಚ್​( ನಾಯಕ), ಉಸ್ಮಾನ್ ಖ್ವಾಜಾ, ಡೇವಿಡ್​ ವಾರ್ನರ್​, ಸ್ಟೀವ್ ಸ್ಮಿತ್, ಶಾನ್ ಮಾರ್ಷ್​, ಗ್ಲೇನ್ ಮ್ಯಾಕ್ಸ್​ವೆಲ್, ಮಾರ್ಕಸ್​ ಸ್ಟೋಯಿನಿಸ್​, ಅಲೆಕ್ಸ್ ಕೇರಿ, ಪ್ಯಾಟ್​ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್​, ಜೇಯ್ ರಿಚರ್ಡ್​ಸನ್, ನಾಥಾನ್ ಕೌಲ್ಟರ್​ ನೈಲ್, ಜಾಸನ್​ ಬೆಹ್ರನ್​ಡ್ರಾಫ್​, ನಾಥಾನ್ ಲೈನ್, ಆ್ಯಡಮ್ ಜಂಪಾ