ಬಂದು ಹೋಗೋಕೆ ಇದು ಬೀಗರ ಮನೆಯೇ..? ಪರಿಷತ್​ ಸಭಾಪತಿ ಗರಂ

ಬೆಂಗಳೂರು: ಬಂದು ಹೋಗೋಕೆ ಇದು ಬೀಗರ ಮನೆಯೇ ? ಸದನದಲ್ಲಿ ಉತ್ತರಿಸಲು ಸಂಬಂಧಪಟ್ಟ ಸಚಿವರು ಇಲ್ಲಾಂದ್ರೆ ಹೇಗೆ ? ಎಂದು ವಿಧಾನ ಪರಿಷತ್ ಕಲಾಪಕ್ಕೆ ಸಚಿವರ ಗೈರು ಹಾಜರಿ ಬಗ್ಗೆ ಸಭಾಪತಿ ಗರಂ ಆಗಿದ್ದಾರೆ.

ಶೂನ್ಯ ವೇಳೆಯಲ್ಲಿ ಉತ್ತರಿಸಲು ಸಂಬಂಧಪಟ್ಟ ಸಚಿವರು ಇಲ್ಲದ ಕಾರಣ ಗರಂ ಆದ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರು ಪದೇ ಪದೇ ಕಲಾಪಕ್ಕೆ ಗೈರಾಗ್ತಿದ್ದಾರೆ. ಜಿ.ಟಿ ದೇವೇಗೌಡ ಬಂದಿದಾರಾ ಎಂದು ಕೇಳಿದರು. ಈಗಷ್ಟೇ ಸದನಕ್ಕೆ ಬಂದು ಹೋದರು ಎಂದು ಉತ್ತರಿಸಲು ಮುಂದಾದ ಸಚಿವ ಶಿವಶಂಕರ್ ರೆಡ್ಡಿ ಮಾತಿಗೆ ಕೆರಳಿದ ಸಭಾಪತಿ, ಸಭಾ ನಾಯಕಿ ಜಯಮಾಲ ಅವರಿಗೆ ಎಚ್ಚರಿಕೆ ನೀಡಿದರು. ಸಚಿವರ ಹಾಜರಾತಿ ಕಡ್ಡಾಯ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv