ಪಂಚಾಯಿತಿ ಅಧ್ಯಕ್ಷೆ ಮೇಲೆ ಕೊಲೆ ಯತ್ನ..!

ಬೆಂಗಳೂರು: ಪಂಚಾಯಿತಿ ಅಧ್ಯಕ್ಷೆಯನ್ನು ಪಂಚಾಯಿತಿ ಉಪಾಧ್ಯಕ್ಷನೇ ಕೊಲೆ ಮಾಡಲು ಯತ್ನಿಸಿರುವ ಆರೋಪ ಸೋಲದೇವನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಸರಘಟ್ಟ ಗ್ರಾಮದಲ್ಲಿ ಕೇಳಿಬಂದಿದೆ.
ಪಂಚಾಯಿತಿ ಉಪಾಧ್ಯಕ್ಷ ಹೇಮಂತ್ ರಿಯಲ್ ಎಸ್ಟೇಟ್ ಉದ್ಯಮಿ. ಆತ 3 ವರ್ಷಗಳ ಹಿಂದೆ ಪಂಚಾಯಿತಿ ಅಧ್ಯಕ್ಷೆ ಅಂಜನಾದೇವಿ ಬಳಿ ನಿವೇಶನ ಖರೀದಿಗಾಗಿ ₹ 5 ಲಕ್ಷ ಹಣ ಪಡೆದಿದ್ದರಂತೆ. ಆದರೆ, ಹೇಮಂತ್​ ನಿವೇಶನವನ್ನು ನೀಡದೆ ಹಣವನ್ನೂ ನೀಡದೆ ಸತಾಯಿಸುತ್ತಿದ್ದರಂತೆ. ಹೇಮಂತ್, ಕಳೆದ ಗುರುವಾರ ಹಣ ವಾಪಸ್ಸು ನೀಡುವುದಾಗಿ ಭರವಸೆ ನೀಡಿದ್ದರಂತೆ. ನಂತರ ಹೇಮಂತ್ ಮತ್ತು ಅವನ ತಮ್ಮ ಮನೆಗೆ ಬಳಿ ಹೋಗಿ ಜಾತಿ ನಿಂದನೆ ಮಾಡಿ, ಮೈಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ಅಂಜನಾದೇವಿ ಆರೋಪಿಸಿದ್ದಾರೆ.  ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.