ಮನೆಗೆಲಸ ಮಾಡುವಂತೆ ಬಾಲಕಿ ಮೇಲೆ ಮನೆಯೊಡತಿ ಹಲ್ಲೆ, ಬಾಲಕಿ ತಾಯಿಯ ಸಾಥ್..!

ಹುಬ್ಬಳ್ಳಿ: ಮನೆಗೆಲಸ ಮಾಡುವಂತೆ ಒತ್ತಾಯಿಸಿ ಬಾಲಕಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಎಳೆದಾಡಿರುವ ಘಟನೆ ನಗರದ ರಂಭಾಪುರಿ ಕಲ್ಯಾಣ ಮಂಟಪದ ಬಳಿ ನಡೆದಿದೆ. ಬಾಲಕಿಯ ತಾಯಿ ಸಾಥ್​ನೊಂದಿಗೆ ಮನೆ ಒಡತಿ ಆಕೆಯನ್ನು ರಸ್ತೆಯಲ್ಲಿ ಅಮಾನುಷವಾಗಿ ಎಳೆದಾಡಿ ಹಿಂಸಿಸಿದ್ದಾರೆ. ಬಾಲಕಿಯನ್ನ ಥಳಿಸುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿಗೆ ಥಳಿಸಿರುವ ವಿಡಿಯೋ ಮಾಧ್ಯಮದಲ್ಲಿ ಪ್ರಸಾರವಾದ ಕೂಡಲೇ ಅಪ್ರಾಪ್ತ ಬಾಲಕಿ ಇದ್ದ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ. ವಿದ್ಯಾನಗರ ಠಾಣೆ ಪೊಲೀಸ್ ಸಬ್​ಇನ್ಸ್ಪೆಕ್ಟರ್ ಎಸ್. ಪಿ. ನಾಯಕ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv