ರಸ್ತೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದವ ಅರೆಸ್ಟ್​ ಆದ

ದಾವಣಗೆರೆ: ಹೆಲ್ಮೆಟ್ ಹಾಕದಿರುವುದನ್ನ ಪ್ರಶ್ನಿಸಿದ್ದಕ್ಕೆ ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ನಡು ರಸ್ತೆಯಲ್ಲಿಯೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ರುದ್ರೇಶ್​ ಬಂಧಿತ ಆರೋಪಿ. ಹೆಲ್ಮೆಟ್ ಹಾಕದೇ ಬೈಕ್ ಸವಾರಿ ಮಾಡುತ್ತಿದ್ದ ರುದ್ರೇಶ್​ನನ್ನು ಎಎಸ್ಐ ಆಂಜನಪ್ಪ ಹಾಗೂ ಪೇದೆ ನಾರಾಯಣ ಅರಸ್ ಪ್ರಶ್ನಿಸಿದ್ದರು. ಇದರಿಂದ ಕೆರಳಿದ ರುದ್ರೇಶ್​ ಪೊಲೀಸರ ಮೇಲೆಯೇ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದ. ನಗರದ ಹದಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆರೋಪಿ ರುದ್ರೇಶನನ್ನು ಬಂಧಿಸಿರುವ ಪೊಲೀಸರು, ಐಪಿಸಿ ಕಲಂ 323, 324, 326, 353, 332, 333, 504, 506 ಅನ್ವಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv