ಹೌದು.. ರಮೇಶ್ ಮುಂಬೈನಲ್ಲಿದ್ದಾರೆ ಎಂದ ಸತೀಶ್ ಜಾರಕಿಹೊಳಿ..!

ದಾವಣಗೆರೆ: ರಮೇಶ್ ಗೋಕಾಕ್​​​ನಲ್ಲಿ ಇಲ್ಲ, ಮುಂಬೈನಲ್ಲಿದ್ದಾರೆ  ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನಿಡಿದ್ದಾರೆ. ಇಷ್ಟು ದಿನ ಸಹೋದರ ರಮೇಶ್ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಸತೀಶ್, ಇಂದು ಈ ರೀತಿ ಹೇಳಿಕೆ ನೀಡಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ.

ಇಂದು ದಾವಣಗೆರೆಯ ಹರಿಹರ ವಾಲ್ಮೀಕಿ ಪೀಠಕ್ಕೆ ಭೇಟಿ ನೀಡಿದ್ದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ.. ಹೌದು ರಮೇಶ್ ಮುಂಬೈನಲ್ಲಿ ಇದ್ದಾರೆ. ಅವರು ಗೋಕಾಕ್​​ನಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ್ರು. ಇನ್ನು ಇದೇ ವೇಳೆ, ನಮ್ಮ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ. ಸಿಎಂ ಕುಮಾರಸ್ವಾಮಿ ಉತ್ತಮ ಬಜೆಟ್ ಮಂಡನೆ ಮಾಡಿದ್ದಾರೆ. ಅದಕ್ಕೆ ಬಜೆಟ್ ಬಗ್ಗೆ ಹಲವರು ವರ್ಣನೆ ಮಾಡಿದ್ದೆ ಸಾಕ್ಷಿ. ಕೃಷಿ, ನೀರಾವರಿಗೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಬಿಎಸ್ ವೈ ಆಡಿಯೋ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv