ಅಥ್ಲೆಟಿಕ್ಸ್‌ನಲ್ಲಿ ಹಿಮಾದಾಸ್‌ಗೆ ಚಿನ್ನದ ಪದಕ

ನವದೆಹಲಿ: ಫಿನ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ವಿಶ್ವ ಅಂಡರ್‌-20 ಅಥ್ಲೇಟಿಕ್ಸ್‌ ಚಾಂಪಿಯನ್‌ಶಿಪ್‌ನ 400 ಮೀಟರ್‌ ಓಟದ ಫೈನಲ್‌ನಲ್ಲಿ ಭಾರತದ ಹಿಮದಾಸ್‌ ಚಿನ್ನದ ಪದಕ ಗೆಲ್ಲೋ ಮೂಲಕ ದಾಖಲೆ ಬರೆದಿದ್ದಾರೆ. ಅಂಡರ್‌-20 ಅಥ್ಲೇಟಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 18 ವರ್ಷದ ಹಿಮದಾಸ್​ ಕೇವಲ 51.46 ಸೆಕೆಂಡ್​ನಲ್ಲಿ 400 ಮೀಟರ್‌ ಓಡಿದ್ದಾರೆ. ಪ್ರತಿಸ್ಪರ್ಧಿ ರೊಮೇನಿಯಾದ ಅಂದ್ರೇಯಾ ಮಿಕ್ಲೋಸ್​ 52.07 ಸೆಕೆಂಡ್​ನಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಗಿಟ್ಟಿಸಿಕೊಂಡರೆ, ಯುಎಸ್​ಎಯ ಟೇಲರ್​ ಮ್ಯಾನ್​ಸನ್​ 52.28 ಸೆಕೆಂಡ್​ಗಳಲ್ಲಿ ಕ್ರಮಿಸಿ ಕಂಚಿಗೆ ತೃಪ್ತಿಪಟ್ಟುಕೊಂಡರು. ಹಿಮದಾಸ್​ ಸೆಮಿಫೈನಲ್​ನಲ್ಲಿ ಕೇವಲ 52.10ಸೆಕೆಂಡ್​ನಲ್ಲಿ ಕ್ರಮಿಸಿ ಫೈನಲ್​ ಪ್ರವೇಶ ಮಾಡಿದ್ದರು. ಮಂಗಳವಾರ ನಡೆದ ಮೊದಲನೇ ಸುತ್ತಿನಲ್ಲಿ 52.25 ಸೆಕೆಂಡ್​​ನಲ್ಲಿ ಕ್ರಮಿಸಿ ಗುರಿಮುಟ್ಟಿದ್ದರು. ಕಳೆದ ಏಪ್ರಿಲ್​ನಲ್ಲಿ ನಡೆದ ಕಾಮನ್​ವೆಲ್ತ್​ ಗೇಮ್​ನಲ್ಲಿ ಭಾಗವಹಿಸಿದ್ದ ಅಸ್ಸಾಂ ಮೂಲದ ಹಿಮದಾಸ್, 51.32 ಸೆಕೆಂಡ್​ನಲ್ಲಿ ಓಡಿದ್ದರು. ಗುವಾಹತಿಯಲ್ಲಿ ನಡೆದ ಅಂತರ್‌ರಾಜ್ಯ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv