ಜುಲೈ 13ರಂದು ರಾಜ್ಯಾದ್ಯಂತ ಅಥರ್ವ ಹವಾ

ಹುಬ್ಬಳ್ಳಿ: ನಟ ಅರ್ಜುನ್​ ಸರ್ಜಾ ಸೋದರಿಯ ಮಗ ಪವನ ತೇಜ್ ಅಥರ್ವ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪಾದಾರ್ಪಣೆ ಮಾಡಿದ್ದಾರೆ ಅಂತಾ ಅಥರ್ವ ನಿರ್ದೇಶಕ ಅರುಣ್ ಹೇಳಿದ್ದಾರೆ.
ನಾಯಕಿಯಾಗಿ ಕರಾವಳಿ ಮೂಲದ ಸನಂ ಶೆಟ್ಟಿ ನಟಿಸಿದ್ದು, ಅರುಣ್ ನಿರ್ದೇಶಿಸಿದ್ದಾರೆ. ಸುಮಾರು 120 ಚಿತ್ರಮಂದಿರಗಳಲ್ಲಿ‌ ರಾಜ್ಯಾದ್ಯಂತ ಬಿಡುಗಡೆಯಾಲಿದೆ. ಇದೊಂದು ಆ್ಯಕ್ಷನ್, ಲವ್ ಕಮ್ ಎಂಟರ್​ಟೈನ್​ಮೆಂಟ್ ಸಿನಿಮಾವಾಗಿದ್ದು, ನಟ ಸದಾ ಇತರರ ಹಿತ ಬಯಸುವವನಾಗಿರುತ್ತಾನೆ ಅಂತಾ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ರಾಘವೇಂದ್ರ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಕೊಲಾರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ನಾಯಕಿ ತೆಲಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಅಥರ್ವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಎಂದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv