H1N1ನಲ್ಲಿ ರಾಜಸ್ಥಾನ ನಂ.1, ಸಾವಿನ ಸಂಖ್ಯೆ 77..!

ನವದೆಹಲಿ: 2019ನೇ ಸಾಲಿನಲ್ಲಿ, ನಿನ್ನೆ ಗುರುವಾರದವರೆಗೂ, H1N1 ನಿಂದ ಸಾವನ್ನಪ್ಪಿದವರ ಸಂಖ್ಯೆ 77ಕ್ಕೆ ಏರಿದೆಯಂತೆ. ಈ ಪೈಕಿ 56 ಮಂದಿ ರಾಜಸ್ಥಾನವೊಂದರಲ್ಲೇ ಸಾವನ್ನಪ್ಪಿದ್ದಾರೆ ಅಂತಾ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜನವರಿ 24 ರವರೆಗೆ ದೇಶದಲ್ಲಿ ಒಟ್ಟು 2,572ಮಂದಿ ಹಂದಿ ಜ್ವರದಿಂದ ಬಳಲುತ್ತಿದ್ದಾರಂತೆ. ಇದರಲ್ಲಿ ರಾಜಸ್ಥಾನದವರೇ 1508 ಮಂದಿ ಇದ್ದು, ಒಟ್ಟು 56 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ರಾಜಸ್ಥಾನ ಬಿಟ್ಟರೆ ಗುಜರಾತ್​ನಲ್ಲಿ 438 ಕೇಸ್​ಗಳು ದಾಖಲಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಮೂರನೇ ಸ್ಥಾನದಲ್ಲಿದ್ದು, ಇಲ್ಲಿಯವರೆಗೆ ದೆಹಲಿಯಲ್ಲಿ 387 ಮಂದಿ H1N1 ನಿಂದ ಬಳಲುತ್ತಿದ್ದಾರೆ. ಇನ್ನು ಕಳೆದ ವರ್ಷ ದೇಶದಲ್ಲಿ 14,992 ಮಂದಿ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,103 ಮಂದಿ ಸೊಂಕಿನಿಂದ ಮೃತಪಟ್ಟಿದ್ದರು ಎಂದು ಇಲಾಖೆ ತನ್ನ ವರದಿಯಲ್ಲಿ ನಮೂದಿಸಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv