ಕೇರಳದಲ್ಲಿ ವರುಣನ ಆರ್ಭಟಕ್ಕೆ 28 ಮಂದಿ ಬಲಿ

ಕೇರಳ: ಕಳೆದೆರಡು ದಿನಗಳಿಂದ ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಬಹುತೇಕ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ವೈನಾಡಿನಲ್ಲಿ ಸಿಕಿಂಗ್‌ ಹೆಲಿಕಾಪ್ಟರ್‌ ಮೂಲಕ ಸಂತ್ರಸ್ಥರನ್ನು ರಕ್ಷಣೆ ಮಾಡುವ ಕಾರ್ಯಚರಣೆ ಮುಂದುವರಿದಿದೆ. ಈಗಾಲೇ ಸೇನೆ ಹಾಗೂ ಎನ್‌ಡಿಆರ್‌ ಸ್ಥಳಕ್ಕೆ ದೌಡಾಯಿಸಿವೆ. ಮಳೆಯಿಂದ ಕೆಲವರು ನಾಪತ್ತೆಯಾಗಿದ್ದು, ಎರ್ನಾಕುಲಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತದಿಂದ 28 ಮಂದಿ ಮೃತಪಟ್ಟಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಈ ಕೇಳರದಲ್ಲಿನ ಮಳೆ ಅವಾಂತರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವಶ್ಯಕತೆ ಇರುವ ಎಲ್ಲಾ ಸಹಕಾರವನ್ನು ನೀಡುತ್ತೇವೆ. ಕೇರಳ ಜನರ ಬೆಂಬಲಕ್ಕೆ ಕೇಂದ್ರ ಇದೆ ಅಂತ ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ನೆರೆಯ ಕೇರಳ ರಾಜ್ಯದ ಸಮಸ್ಯೆಗೆ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಧಾವಿಸಿದ್ದಾರೆ. ಕೇರಳಗೆ ಬೇಕಿರುವ ವೈದ್ಯರ ತಂಡ ಹಾಗೂ 10 ಕೋಟಿ ಮೌಲ್ಯದ ಆಹಾರ, ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿಕೊಂಡುವಂತೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‌ ಅವರಿಗೆ ಸೂಚಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv