ಶ್ರೀಲಂಕಾ ಸರಣಿ ಸ್ಫೋಟ; ಕೃತ್ಯದಲ್ಲಿ ಭಾಗಿ ಆರೋಪ, ಹಲವು ಪಾಕಿಸ್ತಾನಿಯರ ಬಂಧನ

ಕೊಲಂಬೊ: ಎಷ್ಟೇ ಪೆಟ್ಟುಕೊಟ್ರೂ ಪಾಕಿಸ್ತಾನ ತನ್ನ ಮೊಂಡುತನವನ್ನು ಬಿಡೋದಿಲ್ಲ, ಪಾಕಿಸ್ತಾನಿಯರು ಪಾಠ ಕಲಿಯೊಲ್ಲ ಅನ್ನೋದಕ್ಕೆ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಹತ್ಯಾ ದಾಳಿಗಳೇ ಸಾಕ್ಷಿಯಾಗಿವೆ. ಏಕಂದ್ರೆ, ಚರ್ಚ್​​ನಲ್ಲಿ ಈಸ್ಟರ್ ಸಂಡೇ ಪ್ರೇಯರ್​​ನಲ್ಲಿ ಪಾಲ್ಗೊಂಡಿದ್ದ ಅಮಾಯಕರ ಹಾಗೂ ಫೈವ್​ಸ್ಟಾರ್ ಹೋಟೆಲ್​ಗಳಲ್ಲಿ ತಂಗಿದ್ದ ಪ್ರವಾಸಿಗರ ಮೇಲೆ ಆತ್ಮಹತ್ಯಾ ಬಾಂಬರ್​ಗಳು ಸರಣಿ ದಾಳಿ ನಡೆಸಿದ್ರು. ಈ ದಾಳಿಯಲ್ಲಿ 350ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ರೆ, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿ, ತೀವ್ರ ತನಿಖೆ ಕೈಗೊಂಡಿದೆ. ಅಲ್ಲದೇ ಹಲವು ಉಗ್ರರ ನೆಲೆ ಮೇಲೆ ಅಲ್ಲಿನ ಭದ್ರತಾಪಡೆಗಳು ದಾಳಿಕೂಡ ನಡೆಸುತ್ತಾ ಇವೆ. ಅಲ್ಲದೇ ಹಲವು ಆರೋಪಿಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಇದ್ರಲ್ಲಿ ಎಂದಿನಂತೆ ಪಾಕಿಸ್ತಾನಿಯರ ಕೈವಾಡ ಇರೋದು ಸ್ಪಷ್ಟವಾಗಿದ್ದು, ಹಲವು ಪಾಕಿಸ್ತಾನಿಯರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಇಸ್ಲಾಮಿಕ್​ ಸ್ಟೇಟ್​​ ಉಗ್ರರು ಸರಣಿ ಸ್ಫೋಟಗಳ ಹೊಣೆ ಹೊತ್ತ ಮೇಲೆ ಸರ್ಕಾರ, ಉಗ್ರರ ಜಾಲವನ್ನು ಬುಡಸಮೇತ ಕಿತ್ತು ಹಾಕಲು ನಿರ್ಧರಿಸಿ ಕಾರ್ಯಾಚರಣೆ ಕೈಗೊಂಡಿದೆ. ಬುಧವಾರ ರಾತ್ರಿಯಿಂದೀಚೆಗೆ ತಲಾ ಒಬ್ಬ ಈಜಿಪ್ಟ್ ಮತ್ತು ಸಿರಿಯಾ ಪ್ರಜೆಗಳನ್ನು ಶ್ರೀಲಂಕಾ ತನಿಖಾ ಸಂಸ್ಥೆ ವಶಕ್ಕೆ ಪಡೆದಿವೆ. ಆದ್ರೆ, ಹಲವು ಪಾಕಿಸ್ತಾನಿಯರನ್ನು ಬಂಧಿಸಿದ್ದೇವೆ ಅಂತಾ ಅಲ್ಲಿನ ಪಡೆಗಳು ಹೇಳಿದ್ದರೂ, ಎಷ್ಟು ಜನರನ್ನು ಅಂತಾ ಮಾತ್ರ ಹೇಳದೇ ಇರೋದು ಕುತೂಹಲಕ್ಕೆ ಕಾರಣವಾಗಿದೆ. ಇದುವರೆಗೂ ಕನಿಷ್ಟ 76 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಧ್ಯೆ, ವೀಸಾ ಅವಧಿ ಮುಗಿದರೂ ಇನ್ನೂ ಲಂಕಾದಲ್ಲಿಯೇ ಉಳಿದುಕೊಂಡಿರುವ ಪಾಕಿಸ್ತಾನಿಯರನ್ನೂ ಬಂಧಿಸಲಾಗುತ್ತಿದೆ ಎಂದು ಕೊಲಂಬೊ ಪೊಲೀಸರು ತಿಳಿಸಿದ್ದಾರೆ.

ಇಷ್ಟೇ ಅಲ್ಲ, ಶ್ರೀಲಂಕಾದ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅನೇಕ ಪಾಕಿಸ್ತಾನಿಯರು ಭಾನುವಾರದ ಹತ್ಯಾಕಾಂಡದ ನಂತರ ಪರಾರಿಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ, ಎಲ್ಲೇ ಇದ್ದರೂ ಪಾಕಿಸ್ತಾನಿಯರು ಶಾಂತಿಯಿಂದ ಇರಲ್ಲ, ಇನ್ನೊಬ್ಬರನ್ನೂ ಇರಲು ಬಿಡಲ್ಲ ಅಂತಾ ಮತ್ತೆ ಈ ಘಟನೆ ಜಗತ್ತಿನ ಮುಂದೆ ಜಾಹಿರುಗೊಳಿಸಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv