ಕೆ.ಜಿ. ಬೋಪಯ್ಯ ಗೆಲುವು, ಹರಕೆ ತೀರಿಸಿದ ಅಭಿಮಾನಿ

ಕೊಡಗು: ಕೆ.ಜಿ. ಬೋಪಯ್ಯ ಗೆಲುವು ಸಾಧಿಸಿದ ಕಾರಣಕ್ಕೆ ಅಭಿಮಾನಿಯೊಬ್ಬ ಕೇಶಮುಂಡನ ಮಾಡಿಸಿ ಹರಕೆಯೊಪ್ಪಿಸಿದ್ದಾನೆ.  ಜಿಲ್ಲೆಯ ಪಾರಾಣೆ ಗ್ರಾಮದ ಮೂಕಂಡ ಬಾಣೆ ನಿವಾಸಿ ಕೆ.ಎಂ. ಮಣಿಕಂಠ ಮುಡಿ ನೀಡಿದ ವ್ಯಕ್ತಿ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆ.ಜಿ.ಬೋಪಯ್ಯ ಗೆದ್ದರೆ ತಲೆಗೂದಲು, ಗಡ್ಡ-ಮೀಸೆ ತೆಗೆದು ಮುಡಿ ಅರ್ಪಿಸುವುದಾಗಿ ಭಾಗಮಂಡಲಕ್ಕೆ ಹರಕೆ ಹೊತ್ತಿದ್ದರು. ವಿರಾಜಪೇಟೆ ಕ್ಷೇತ್ರದಲ್ಲಿ ಬೋಪಯ್ಯ ಭರ್ಜರಿ ಗೆಲುವು ಸಾಧಿಸಿದ್ದರು. ಹೀಗಾಗಿ ನುಡಿದ ಮಾತಿನಂತೆ ಶುಕ್ರವಾರ ಭಾಗಮಂಡಲಕ್ಕೆ ತೆರಳಿದ ಮಣಿಕಂಠ ತಮ್ಮ ಹರಕೆ ಸಲ್ಲಿಸಿದ್ದಾರೆ. ನಂತರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿದ್ರು. ಬಳಿಕ ತಲಕಾವೇರಿಗೆ ತೆರಳಿ ಅಲ್ಲಿಯೂ ವಿಶೇಷ ಪೂಜೆ ನೆರವೇರಿಸಿ ಬೋಪಯ್ಯನವರಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಪ್ರಾರ್ಥಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv