ಶರವಣಗೆ ಸಚಿವ ಸ್ಥಾನಕ್ಕೆ ಜಿಲ್ಲಾ ಆರ್ಯವೈಶ್ಯ ಸಮಾಜ ಒತ್ತಾಯ

ರಾಯಚೂರು: ಮೇಲ್ಮನೆ ಸದಸ್ಯ, ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಟಿ.ಎ ಶರವಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ರಾಯಚೂರು ಆರ್ಯವೈಶ್ಯ ಸಮಾಜ ಮುಖ್ಯಮಂತ್ರಿ ಹೆಚ್​​​.ಡಿ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದೆ.
ಸಮಾಜದ ಮುಖಂಡರು ನಗರದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ, ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು. ಚುನಾವಣೆಯಲ್ಲಿ ಪಕ್ಷದಿಂದ ರಾಯಚೂರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಪಕ್ಷ ಸಂಘಟನೆ ಮಾಡಿ ಜಿಲ್ಲೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಕಾಯಾ, ವಾಚಾ, ಮನಸ್ಸಿನಿಂದ ಹಲವು ವರ್ಷಗಳಿಂದ ಶರವಣ ಅವರು ದುಡಿದಿದ್ದಾರೆ‌. ಕರ್ನಾಟಕದಲ್ಲಿ ನಮ್ಮ ಸಮಾಜದಿಂದ ಏಕೈಕ ವ್ಯಕ್ತಿ ವಿಧಾನ ಪರಿಷತ್ತನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಶರವಣ ಅವರಿಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೊಟ್ಟು ರಾಜ್ಯದಲ್ಲಿರುವ 15 ಲಕ್ಷ ಆರ್ಯ ವೈಶ್ಯ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ರು. ಅಲ್ಲದೇ ಜೆಡಿಎಸ್​​​​​ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಆರ್ಯವೈಶ್ಯ ಸಮಾಜಕ್ಕೆ ಮೀಸಲಾತಿ ಹಾಗೂ ಕರ್ನಾಟಕ ಆರ್ಯವೈಶ್ಯ ಕ್ಷೇಮಾಭಿವೃದ್ಧಿ ಸಂಘವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv