ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಿ ಇವಿಎಂ ಹ್ಯಾಕ್ ಆಗಿದೆ: ಅರುಣ್​ ಮಾಚಯ್ಯ

ಕೊಡಗು: ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಿ ಇವಿಎಂ ಹ್ಯಾಕ್ ಆಗಿದೆ. ವಿಧಾನಸಭೆಯ ಚುನಾವಣೆ ಬಗ್ಗೆ ಬಹಳ ಸಂಶಯ ಕಾಡುತ್ತಿದೆ ಎಂದು ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮ್ಯಾಗ್ನೆಟ್ ಚಿಪ್ ಬಳಸಿ ಇವಿಎಂ ಹ್ಯಾಕ್ ಮಾಡಬಹುದು. ಅಂಚೆ ಮತಗಳ ಬಗ್ಗೆಯೂ ಗುಮಾನಿ ಇದೆ. ವಿವಿ ಪ್ಯಾಟ್ ವೋಟ್ ಎಣಿಕೆ ಮಾಡಬೇಕು ಎಂದು ಆಗ್ರಹಿಸಿದ್ರು. ಈ ಕುರಿತು ಡಿಸಿಗೆ ದೂರು ನೀಡುವುದಾಗಿ ಅರುಣ್ ಮಾಚಯ್ಯ ತಿಳಿಸಿದ್ರು . ಕೆಲವು ವ್ಯಕ್ತಿಗಳ ಬಗ್ಗೆ ಅನುಮಾನವಿದ್ದು, ಸೈಬರ್ ಕ್ರೈಂಗೆ ದೂರು ನೀಡಲು ನಿರ್ಧರಿಸಲಾಗಿದೆ. ರಾಜ್ಯ ಹೈಕೋರ್ಟ್​ಗೂ ರಿಟ್ ಪಿಟಿಷನ್ ಹಾಕುತ್ತೇನೆ ಎಂದು ಮಾಚಯ್ಯ ಮಾಹಿತಿ ನೀಡಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv