ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬರ ಮೇಲೆ ಒಬ್ಬರು ಕೆಸರೆರೆಚಾಟ ಮುಂದುವರಿದೆ. ಸುಪ್ರೀಂಕೋರ್ಟ್ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತಾಗಿ ತೀರ್ಪು ನೀಡಿದ್ರೂ, ಕಾಂಗ್ರೆಸ್ ಮಾತ್ರ ರಫೇಲ್ ಜಪವನ್ನು ಮಾಡುತ್ತಲೇ ಇದೆ. ಅಮೆರಿಕಾದಿಂದ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ನಾನು ರಫೇಲ್ ಕುರಿತಂತೆ ರಾಹುಲ್ಗಾಂಧಿ ಭಾಷಣ ವೀಕ್ಷಿಸಿದಾಗ, ಅವರು ಪ್ರಧಾನಿ ವಿರುದ್ಧ ಹೊಟ್ಟೆ ಉರಿಯಿಂದ ವೈಯಕ್ತಿಕ ದ್ವೇಷ ತುಂಬಿ ಮಾತನಾಡುವುದು ಕಂಡುಬಂತು ಅಂತಾ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಹೇಗೆ ಫೇಲ್ ಆದ ವಿದ್ಯಾರ್ಥಿ, ತರಗತಿಯ ಱಂಕ್ ವಿದ್ಯಾರ್ಥಿ ಮೇಲೆ ಹೊಟ್ಟೆ ಉರಿ ಇಟ್ಟುಕೊಂಡು ಮಾತನಾಡ್ತಾನೋ ಹಾಗೇನೇ ರಾಹುಲ್ ಗಾಂಧಿ, ಮೋದಿ ವಿರುದ್ಧ ಮಾತನಾಡಿದ್ದಾರೆ ಅಂತಾ ಜೇಟ್ಲಿ ಟಾಂಗ್ ಕೊಟ್ಟಿದ್ದಾರೆ.
ರಾಹುಲ್ ಗಾಂಧಿ ಪಾರ್ಲಿಮೆಂಟ್ಗೆ ಚ್ಯುತಿ ತಂದಷ್ಟು, ಇನ್ಯಾರು ತಂದಿಲ್ಲ ಎಂಬ ವಿಷಯ ಇತಿಹಾಸ ಪುಟದಲ್ಲಿ ಉಳಿದಿರುತ್ತೆ ಅಂತ ಟೀಕಿಸಿದ್ದಾರೆ. ಇನ್ನು ಇವಿಎಂನಿಂದ ಬಿಜೆಪಿ ಗೋಲ್ಮಾಲ್ ಮಾಡುತ್ತೆ. ಹಾಗಾಗಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ತರಬೇಕೆಂದು ವಿಪಕ್ಷಗಳು ಒತ್ತಡ ಹೇರುತ್ತಿದೆ. ಆದ್ರೆ ಇವಿಎಂ ಅನ್ನ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮುನ್ನವೇ ಚುನಾವಣಾ ಆಯೋಗ ಜಾರಿಗೆ ತಂದಿತ್ತು ಎಂದು ಜೇಟ್ಲಿ ತಮ್ಮ ಪೋಸ್ಟ್ನಲ್ಲಿ ಟಾಂಗ್ ಕೊಟ್ಟಿದ್ದಾರೆ.
Follow us on:
YouTube: firstNewsKannada Instagram: firstnews.tv Face Book: firstnews.tv Twitter: firstnews.tv