ಯಾವುದೇ ಖಾತೆಯ ಜವಾಬ್ದಾರಿ ಬೇಡ: ಮೋದಿಗೆ ಜೇಟ್ಲಿ ಪತ್ರ

ನವದೆಹಲಿ: ಕಳೆದ ಅವಧಿಯ ಎನ್​ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಅರುಣ್​ ಜೇಟ್ಲಿ, ನೂತನ ಸರ್ಕಾರದಲ್ಲಿ ತನಗೆ ಯಾವುದೇ ಮಹತ್ವದ ಜವಾಬ್ದಾರಿಗಳನ್ನು ನೀಡದಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ 5 ವರ್ಷಗಳ ಅವಧಿಯಲ್ಲಿ ನಾನು ನಿಮ್ಮ ನೇತೃತ್ವದ ಸರ್ಕಾರದಲ್ಲಿ ಒಬ್ಬನಾಗಿದ್ದು ನನಗೆ ದೊಡ್ಡ ಗೌರವ ಹಾಗೂ ಈ ವೇಳೆ ನಾನು ಸಾಕಷ್ಟು ಕಲಿತಿದ್ದೀನಿ . ಆದ್ರೆ ಕಳೆದ 18 ತಿಂಗಳಿನಿಂದ ನನ್ನ ಆರೋಗ್ಯದಲ್ಲಿ ಗಂಭೀರ ಸಮಸ್ಯೆಗಳು ಎದುರಾಗಿವೆ. ಪ್ರಚಾರದ ವೇಳೆ ನನಗೆ ನೀಡಿದ್ದ ಜವಾಬ್ದಾರಿಗಳನ್ನ ನಿಭಾಯಿಸಿದ್ದೇನಾದ್ರೂ, ಮುಂದೆ ನನಗೆ ಯಾವುದೇ ಜವಾಬ್ದಾರಿ ನೀಡದಂತೆ ನೀವು ಕೇದರನಾಥಕ್ಕೆ ಹೋಗುವಾಗಲೇ ನಾನು ಮೌಖಿಕವಾಗಿ ಹೇಳಿದ್ದೆ. ಇದರಿಂದ ನನ್ನ ಆರೋಗ್ಯ ಹಾಗೂ ಚಿಕಿತ್ಸೆ ಮೇಲೆ ಗಮನಹರಿಸಲು ನೆರವಾಗುತ್ತದೆ. ನಾಳೆ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ನನ್ನ ಆರೋಗ್ಯದ ಕಡೆ ಗಮನ ಕೊಡಲು ಸಮಯ ಬೇಕು. ಹೀಗಾಗಿ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನೀಡದಂತೆ ಔಪಚಾರಿಕವಾಗಿ ಪತ್ರ ಬರೆಯುತ್ತಿದ್ದೇನೆ. ಪಕ್ಷ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಇತರೆ ಯಾವುದೇ ಅನೌಪಚಾರಿಕೆ ಕೆಲಸಗಳನ್ನ ನಿರ್ವಹಿಸಲು ನಾನು ಸಿದ್ಧನಿರುತ್ತೇನೆ ಎಂದು ಅರುಣ್​ ಜೇಟ್ಲಿ ಈ ಪತ್ರದಲ್ಲಿ ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv