ಒಮ್ಮೆ ಮೂಡುವ ಚಿತ್ರ ಕ್ಷಣದಲ್ಲೇ ಮಾಯ, ಇದು ಮೆಮೋರೀಸ್ ಆಫ್ ಪಾಸರ್ ಬೈ

ಸಾಮಾನ್ಯವಾಗಿ ಪೇಂಟಿಂಗ್​ಗಳು ಒಮ್ಮೆ ಮಾಡಿದ್ರೆ ಅದು ಶಾಶ್ವತವಾಗಿ ಇರುತ್ತೆ ಅಂತಾರೆ. ಆದ್ರೆ, ಜರ್ಮನಿಯ ಕಲಾವಿದರೊಬ್ಬರು ಮಾಯವಾಗೋ ಪೇಂಟಿಂಗ್ ರಚಿಸ್ತಾರೆ ಅಂದ್ರೆ ನೀವು ನಂಬಲೇ ಬೇಕು. ಇದಕ್ಕೆ ಅವರು ಮೆಮೋರೀಸ್ ಆಫ್ ಪಾಸರ್ ಬೈ ಅಂತ ಕರೆದಿದ್ದಾರೆ. ಅಂದಹಾಗೆ, ಈ ರೀತಿಯ ವಿಶಿಷ್ಟ ಕಲೆಯನ್ನ ಕರಗತ ಮಾಡಿರುವ ಕಲಾವಿದ ಮಾರಿಯೋ ಕ್ಲಿಂಗ್​ಮನ್.
ಮಾಯಾವಾಗೋ ಪೇಟಿಂಗ್ ರಚಿಸ್ತಾರೆ ಅಂದರೆ ಅದರ ಅರ್ಥ, ಅವರು ನಿಮ್ಮ ಚಿತ್ರವನ್ನ ಬಿಡಿಸಿ, ನಂತರ ಮಾಯವಾಗುತ್ತೆ ಅಂತಲ್ಲ. ಮಾರಿಯೋ ಕ್ಲಿಂಗ್​ಮನ್ ಹೊಸ ಟೆಕ್ನಿಕ್ ಒಂದನ್ನ ಕಂಡು ಹಿಡಿದಿದ್ದಾರೆ. ಅದುವೇ ಸೆಲ್ಫ್ ಜನರೇಟಿವ್ ಎಐ ಆರ್ಟ್ ವರ್ಕ್. ಅಂದ್ರೆ, ಇದರಲ್ಲಿ ಚಿತ್ರ ತನ್ನಿಂತಾನೆ ರೂಪುಗೊಳ್ಳುತ್ತೆ. ಎಐ ಬ್ರೇನ್ ಸೆನ್ಸಾರ್ ಇರುವ ಎರಡು ಸ್ಕ್ರೀನ್​ಗಳನ್ನ ಅಳವಡಿಸಲಾಗುತ್ತೆ. ಇದಕ್ಕೆ ವಿದ್ಯುತ್ ಅವಶ್ಯಕತೆ ಇದ್ದು, ಕರೆಂಟ್ ಇತ್ತು ಅಂದ್ರೆ, ಸಾಕು. ಆ ಸ್ಕ್ರೀನ್​ಗಳ ಎದುರು ನೀವು ಹಾದು ಹೋದ್ರೆ ನಿಮ್ಮ ಚಿತ್ರ ರೆಡಿಯಾಗುತ್ತೆ. ಒಂದರಲ್ಲಿ ಗಂಡು ಹಾಗೂ ಮತ್ತೊಂದರಲ್ಲಿ ಹೆಣ್ಣಿನ ರೂಪದ ಚಿತ್ರಗಳು ಸಿದ್ಧ.
ಆದ್ರೆ ಈ ಚಿತ್ರಗಳನ್ನ ನೀವು ಹೆಚ್ಚು ಹೊತ್ತು ನೋಡೋಕೆ ಸಾಧ್ಯವಿಲ್ಲ. ಯಾಕಂದ್ರೆ ಒಮ್ಮೆ ಮೂಡುವ ಚಿತ್ರ, ಕೆಲವೇ ಕ್ಷಣಗಳಲ್ಲಿ ನಿಮ್ಮ ಕಣ್ಣೆದುರೇ ಮಾಯವಾಗಿ ಬಿಟ್ಟಿರುತ್ತದೆ. ಸದ್ಯ ಈ ಮೆಮೋರಿಸ್ ಆಫ್ ಪಾಸರ್​ ಬೈ ವರ್ಷನ್ 1 ಅನ್ನು ಹರಾಜಿಗಿಡಲಾಗುತ್ತಿದೆ. ಲಂಡನ್​ನ ಸೋತ್​ಬಿಯಲ್ಲಿ ಮಾರ್ಚ್ 6ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಸ್ಪೆಷಲ್ ಆರ್ಟ್ 30 ರಿಂದ 40 ಸಾವಿರ ಪೌಂಡ್​ ಅಂದರೆ 27 ಲಕ್ಷದಿಂದ 36 ಲಕ್ಷ ರೂಪಾಯಿಗೆ ಹರಾಜಾಗುವ ನಿರೀಕ್ಷೆ ಇದೆಯಂತೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv