L&T ಫೈನಾನ್ಸ್ ಕಂಪನಿಯಿಂದ ಸಾಲ, ಐವರು ಮಹಿಳೆಯರಿಗೆ ಕೋಲ್ಕೊತಾ ಕೋರ್ಟ್​​​​​ನಿಂದ ಅರೆಸ್ಟ್​​ ವಾರೆಂಟ್

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ತೋಪೇನಹಳ್ಳಿ ಗ್ರಾಮದ ಸ್ವ ಸಹಾಯ ಸಂಘದ ಐದು ಜನ ಮಹಿಳೆಯರಿಗೆ ಕೋಲ್ಕೊತಾ ಕೋರ್ಟ್ ಅರೆಸ್ಟೆ ವಾರೆಂಟ್ ಜಾರಿ ಮಾಡಿದೆ.

2017-18 ನೇ ಸಾಲಿನಲ್ಲಿ L&T ಫೈನಾನ್ಸ್ ಕಂಪನಿಯಿಂದ ಮಹಿಳಾ ಸಂಘದ ಆಶ್ರಯದಲ್ಲಿ 50 ಜನ ಮಹಿಳೆಯರು ತಲಾ ₹ 50 ಸಾವಿರ ಸಾಲವಾಗಿ ಪಡೆದುಕೊಂಡಿದ್ದರು. ಕಂತಿನ ಮೂಲಕ ಸಾಲ‌ ಮರು ಪಾವತಿ‌ ಮಾಡಬೇಕಿತ್ತು. ಆದರೆ 5 ಜನ ಮಹಿಳೆಯರು ಕಳೆದ ಒಂದು ವರ್ಷದಿಂದ ಮಳೆ ಬೆಳೆ ಇಲ್ಲದೆ ಮಹಿಳೆಯರು ನಾಲ್ಕೈದು ಕಂತು ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಕಂಪನಿಯೂ ಕೋಲ್ಕೊತಾ ಕೋರ್ಟ್​​ನಿಂದ ಅರೆಸ್ಟೆ ವಾರೆಂಟ್ ನೀಡಿದೆ. ಆದ ಕಾರಣ ಕೋಲ್ಕೊತಾ ಕೋರ್ಟ್ ವಾರೆಂಟ್ ನೀಡಿದೆ. ಪೊಲೀಸರು ಮಹಿಳೆಯರಿಗೆ ನವೆಂಬರ್ 30ರ ವರೆಗೆ ಮಾತ್ರ ಗಡುವು ನೀಡಿದ್ದಾರೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv