ಆರ್ಮಿ ಆಫೀಸರ್​ ಹೊಡೆತಕ್ಕೆ ನಲುಗಿದ್ನಂತೆ ಉಗ್ರ ಅಜರ್​​​​​​…!

ನವದೆಹಲಿ: ಪುಲ್ವಾಮಾ ದಾಳಿಯ ಮೇನ್​ ಕಿಂಗ್​ಪಿನ್​ ಜೈಷ್​-ಇ-ಮೊಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಮೋಸ್ಟ್​ ವಾಟೆಂಡ್​​ ಟೆರರಿಸ್ಟ್​.. ಈಗ ಅಡಗಿ ಕುಳಿತೇ ಎಗರಾಡುತ್ತಿರುವ ಈ ಪಾತಕಿಗೆ ಹಿಂದೊಮ್ಮೆ ಸೇನೆಯ ಅಧಿಕಾರಿಯೊಬ್ಬರು ಮುಟ್ಟಿ ನೋಡಿಕೊಳ್ಳುವ ಹಾಗೇ ಕೊಟ್ಟಿದ್ರು. 1994ರಲ್ಲಿ ಭಾರತದಲ್ಲಿ ಬಂಧನವಾಗಿದ್ದ ಅಜರ್​ಗೆ ಸೇನೆಯ ತನಿಖಾಧಿಕಾರಿಯೊಬ್ಬರು ಕೈ ರುಚಿ ತೋರಿಸಿದ್ದರು. ಪೋರ್ಚುಗಲ್​ನ ಪಾಸ್​ಪೋರ್ಟ್​ ಬಳಸಿ ಬಾಂಗ್ಲಾದೇಶ ಮೂಲಕ ಭಾರತದೊಳಗೆ ನುಸುಳಿದ್ದ ಅಜರ್​ನನ್ನ ಬಂಧಿಸಲಾಗಿತ್ತು. ಈ ವೇಳೆ ಆಗ ಅಜರ್​ ವಿಚಾರಣೆ ನಡೆಸಿದ್ದ ಸೇನಾಧಿಕಾರಿಯೊಬ್ಬರು ಮಸೂದ್​ ಅಜರ್​ ಕಪಾಳಕ್ಕೆ ರಪ್​ ಅಂತಾ ಹೊಡೆದಿದ್ರಂತೆ. ಸೇನಾಧಿಕಾರಿಯ ಏಟಿಗೆ ಅಜರ್​ ಮೈ ಕೈ ಒದ್ದೆಯಾಗಿತ್ತಂತೆ. ಈ ಕುರಿತು ಮಾಜಿ ಪೊಲೀಸ್​ ಅಧಿಕಾರಿಯೊಬ್ಬರು ಅಂದಿನ ದಿನವನ್ನ ನೆನಪುಮಾಡಿಕೊಂಡಿದ್ದಾರೆ. ಅಜರ್​ ಬಾಯಿ ಬಿಡಿಸಲು ನಾವೇನು ಜಾಸ್ತಿ ಕಷ್ಟ ಪಟ್ಟಿರಲಿಲ್ಲ. ಅವನನ್ನ ನಿಭಾಯಿಸೋದು ತುಂಬಾ ಸುಲಭವಾಗಿತ್ತು, ನಮ್ಮ ಅಧಿಕಾರಿಯ ಒಂದೇ ಏಟಿಗೆ ಅಜರ್​ ನಡುಗಿ ತನ್ನೆಲ್ಲಾ ಮಾಹಿತಿಯನ್ನ ನಮ್ಮೊಂದಿಗೆ ಹಂಚಿಕೊಂಡಿದ್ದ ಅಂತ ತಿಳಿಸಿದ್ದಾರೆ. ಇನ್ನು, ಅಜರ್​ನನ್ನ ಕಂದಹಾರ್​ ವಿಮಾನ ಹೈಜಾಕ್​ ಆದ ಬಳಿಕ ಬಿಡುಗಡೆ ಮಾಡಲೇಬೇಕಾದ ಪರಿಸ್ಥಿತಿ ಬಂತು ಅಂತಲೂ ಹೇಳಿದ್ದಾರೆ.