ಸೈನಿಕ ಪತಿಯ ಜೀವಕ್ಕೆ ರಕ್ಷಣೆ ಇಲ್ಲ ಅಂತ ಪತ್ನಿ ಆತ್ಮಹತ್ಯೆ…!

ಗುಜರಾತ್​​ (ದ್ವಾರಕ): ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಹುತಿ ಬಾಂಬ್​ ದಾಳಿಯಿಂದ ಗಡಿ ಕಾಯುವ ಸೈನಿಕರ ರಕ್ಷಣೆಯ ಮೇಲೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದರ ನಡುವೆ ಪತಿಯ ಜೀವಕ್ಕೆ ರಕ್ಷಣೆ ಇಲ್ಲ ಎಂದು ಮನನೊಂದ ಸೈನಿಕನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆಯೊಂದು ಗುಜರಾತ್​ನ ದ್ವಾರಕ ಜಿಲ್ಲೆಯಲ್ಲಿ ನಡೆದಿದೆ. ಪುಲ್ವಾಮಾ ದಾಳಿ ಬಳಿಕ ಭಯಕ್ಕೆ ಒಳಗಾಗಿದ್ದ ಸೈನಿಕ ಭೂಪೇಂದ್ರ ಶಿನ್​​​ ಪತ್ನಿ 22 ವರ್ಷದ ಮೀನಾಕ್ಷಿ ಜೇಥ್ವಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಸೈನಿಕನನ್ನ ಮೀನಾಕ್ಷಿ ವಿವಾಹವಾಗಿದ್ದರು. ಪತಿ ಜಮ್ಮು-ಕಾಶ್ಮೀರದ ಗುಲ್ಮಾರ್ಗ್​​​​ನಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv