ಈಗ ಮಹಿಳೆಯರೂ ಮಿಲಿಟರಿ ಪೊಲೀಸ್ ಆಗಬಹುದು..!

ನವದೆಹಲಿ: ಮಹಿಳೆಯರು ಈಗ ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಪುರುಷಕರಿಗೆ ಸಮನಾಗಿ ತಾವೂ ಸಾಧಿಸಿ ತೋರಿಸುತ್ತಿದ್ದಾರೆ. ಇನ್ನು, ಸೇನೆಯ ವಿಚಾರಕ್ಕೆ ಬಂದ್ರೆ, ಅಲ್ಲೂ ಮಹಿಳೆಯರು ತಮ್ಮ ಶಕ್ತಿ ಏನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  ಆದ್ರೆ ಭಾರತೀಯ ಸೇನೆಯಲ್ಲಿದ್ರೂ, ಮಹಿಳೆಯರು ಮಿಲಿಟರಿ ಪೊಲೀಸ್​ಗಳಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಈಗ ಅದಕ್ಕೂ ಕಾಲ ಕೂಡಿ ಬಂದಿದೆ. 2017ರಲ್ಲೇ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಮಹಿಳೆಯರನ್ನೂ ಜವಾನ್​ಗಳಾಗಿ ಸೇವೆಗೆ ತೆಗೆದುಕೊಳ್ಳೋದಾಗಿ ಹೇಳಿದ್ರು. ಇದೀಗ ಎರಡು ವರ್ಷಗಳ ಬಳಿಕ ಮಹಿಳೆಯರನ್ನ ಮಿಲಿಟರಿ ಪೊಲೀಸ್ ಪಡೆಗೆ ನೇಮಕ ಮಾಡಿಕೊಳ್ಳಲಾಗ್ತಿದೆ. ಈ ಮೂಲಕ ಭಾರತೀಯ ಭೂ ಸೇನೆ ಹೊಸ ಇತಿಹಾಸವನ್ನ ಸೃಷ್ಟಿಸುತ್ತಿದೆ.

ಈಗಾಗಲೇ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಆನ್​ಲೈನ್​ನಲ್ಲಿ ರಿಜಿಸ್ಟ್ರೇಷನ್ ನಡೀತಿದೆ. ಜೂನ್ 8ರವರೆಗೂ ಮಿಲಿಟರಿ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಲು ಆಸಕ್ತಿ ಇರುವ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಸದ್ಯ ಮಹಿಳೆಯರು ಸೇನೆಯ, ಆರೋಗ್ಯ, ಕಾನೂನು, ಶಿಕ್ಷಣ, ಸಿಗ್ನಲ್ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ, ಇಲ್ಲಿವರೆಗೂ ಮಿಲಿಟರಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸಿಲ್ಲ.

ಮಿಲಿಟರಿ ಕಂಟೋನ್ಮೆಂಟ್​ಗಳಲ್ಲಿ, ಆರ್ಮಿ ಕ್ಯಾಂಪ್​ಗಳಲ್ಲಿ ಗಸ್ತು, ಸೈನಿಕರು ನಿಯಮಗಳನ್ನ ಉಲ್ಲಂಘಿಸದಂತೆ ನೋಡಿಕೊಳ್ಳುವುದು, ಯೋಧರು ಹಾಗೂ ಸಾಮಾನು ಸರಂಜಾಮುಗಳ ಸುಗಮ ಸಾಗಾಟ, ಸಿವಿಲ್ ಪೊಲೀಸರಿಗೆ ಅವಶ್ಯಕತೆ ಇದ್ದಾಗ ನೆರವು ನೀಡುವುದು ಮುಂತಾದವು ಮಿಲಿಟರಿ ಪೊಲೀಸರ ಕರ್ತವ್ಯವಾಗಿರುತ್ತದೆ. ವಾರ್ಷಿಕ 52 ಮಹಿಳೆಯರಂತೆ ಒಟ್ಟಾರೆ 800 ಮಹಿಳಾ ಸಿಬ್ಬಂದಿಯನ್ನ ಮಿಲಿಟರಿ ಪೊಲೀಸ್​ಗೆ ನೇಮಕ ಮಾಡಿಕೊಳ್ಳಲು ಸದ್ಯ ಸೇನೆ ನಿರ್ಧರಿಸಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv