ಪ್ರೇಯಸಿ ಮೇಲೆ ಹಲ್ಲೆ ಮಾಡಿದ್ದ ಅರ್ಮಾನ್ ಅಂದರ್..

ಮುಂಬೈ: ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ತನ್ನ ಗರ್ಲ್​ ಫ್ರೆಂಡ್ ನೀರು ರಂಧಾವಾ ಮೇಲೆ ಹಲ್ಲೆ ಮಾಡಿದ್ದ ವಿಷಯ ತುಂಬಾನೇ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಭಂದಿಸಿದಂತೆ ಅರ್ಮಾನ್ ಕೊಹ್ಲಿ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಇವಾಗ ಲೇಟೆಸ್ಟ ಸುದ್ದಿಯೇನೆಂದರೆ ಗರ್ಲ್​ ಫ್ರೆಂಡ್ ನೀರು ರಂಧಾವಾ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಕ್ಕಾಗಿ ಮುಂಬೈನ ಸಂತಾಕ್ರೂಜ್ ಠಾಣೆ ಪೊಲೀಸರು ಬಾಲಿವುಡ್ ನಟ ಅರ್ಮಾನ್​ರನ್ನ ಬಂಧಿಸಿದ್ದಾರೆ.

ಅರ್ಮಾನ್ ಮಲಿಕ್ ಮತ್ತು ನೀರು ರಂಧಾವಾಗೆ ತಮ್ಮ ಕಾಮನ್ ಫ್ರೆಂಡ್ ಒಬ್ಬರ ಮೂಲಕ ಪರಿಚಯವಾಗಿ 2015 ರಿಂದ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರು. ಆದರೆ ಈಗ ಇಬ್ಬರ ನಡುವೆ ನಾನೊಂದು ತೀರ ನೀನೊಂದು ತೀರ ಎನ್ನುವ ಪರಿಸ್ಥಿತಿಯಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv