ಮುಂಬೈ ಟಿ20 ಲೀಗ್​ನಲ್ಲಿ ಮಿಂಚಿದ ಅರ್ಜುನ್ ತೆಂಡೂಲ್ಕರ್..!

ಮುಂಬೈ ಟಿ20 ಲೀಗ್​ನಲ್ಲಿ ಕ್ರಿಕೆಟ್​ ದೇವರು, ಸಚಿನ್ ತೆಂಡೂಲ್ಕರ್​ ಮಗ ಅರ್ಜುನ್ ತೆಂಡೂಲ್ಕರ್​ ಆಲ್​ರೌಂಡರ್​ ಪ್ರದರ್ಶನದ ಮೂಲಕ ಮಿಂಚಿದ್ದಾರೆ.ಆಕಾಶ್ ಟೈಗರ್ಸ್​ ಎಂಡಬ್ಲೂಎಸ್​ ಪರ ಆಡುತ್ತಿರುವ ಅರ್ಜುನ್​, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ  ಟ್ರಯಂಫ್ಸ್ ನೈಟ್ಸ್ MNE ವಿರುದ್ಧ ಬ್ಯಾಟಿಂಗ್​ ಹಾಗು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ರು.ಮೊದಲಿಗೆ ಬೌಲಿಂಗ್​ನಲ್ಲಿ 3 ಓವರ್​ ಬೌಲ್ ಮಾಡಿ 21 ರನ್​ಗೆ 3 ವಿಕೆಟ್​ ಪಡೆದ ಅರ್ಜುನ್​, ಬ್ಯಾಟಿಂಗ್​ನಲ್ಲಿ ಒನ್​ಡೌನ್​ನಲ್ಲಿ ಕ್ರೀಸ್​ಗಿಳಿದು 19 ಎಸೆತಗಳಲ್ಲಿ 1 ಬಿಗ್ ಸಿಕ್ಸರ್ ಸಹಿತ 23 ರನ್​ ಬಾರಿಸಿದ್ರು.ಈ ಮೂಲಕ ತಮ್ಮ ತಂಡ 5 ವಿಕೆಟ್​ಗಳ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ರು.ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಟ್ರಯಂಫ್ಸ್ ನೈಟ್ಸ್ MNE 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್​ ಬಾರಿಸಿತ್ತು.ಈ ಗುರಿಯನ್ನ ಬೆನ್ನಟ್ಟಿದ ಆಕಾಶ್ ಟೈಗರ್ಸ್, ಇನ್ನು 3 ಬಾಲ್ ಬಾಕಿ ಇರುವಂತೆಯೆ ಗೆಲುವಿನ ದಡ ಸೇರಿತು.ಅರ್ಜುನ್​ ತೆಂಡೂಲ್ಕರ್ ಪ್ರದರ್ಶನನ್ನ ಸಚಿನ್ ಗೆಳೆಯ, ಟೀಂ ಇಂಡಿಯಾ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಕೊಂಡಾಡಿದ್ದಾರೆ.ಟ್ವಿಟ್ ಮೂಲಕ ಅರ್ಜುನ್​ಗೆ ಅಭಿನಂದಿಸಿದ್ದಾರೆ.ಮೊದಲು ಅಪ್ಪ ಎರಡನ್ನೂ ಗೆಲ್ಲುತ್ತಿದ್ರು, ಈಗ ಅವರ ಮಗನ ಜೊತೆಯು ಅದೇ ನಡೆಯುತ್ತಿದೆ.ಆಕಾಶ್ ಟೈಗರ್ಸ್ ಹಾಗು ಅರ್ಜುನ್ ಇಬ್ಬರು ಚೆನ್ನಾಗಿ ಆಡಿದ್ರು ಎಂದು ಕಾಂಬ್ಳಿ ಟ್ವಿಟ್ ಮಾಡಿದ್ದಾರೆ.