ಅನುಷ್ಕಾಳಿಂದ ಬೈಸಿಕೊಂಡ ಅರ್ಹಾನ್​ಗೂ ಇದೆ ಬಾಲಿವುಡ್ ಬ್ಯಾಕ್​ಗ್ರೌಂಡ್..!

ದೆಹಲಿ: ಇತ್ತೀಚಿಗೆ ರಸ್ತೆಯಲ್ಲಿ ಕಸ ಎಸೆದ ವ್ಯಕ್ತಿಗೆ ಅನುಷ್ಕಾ ಶರ್ಮಾ ಬೈದಿದ್ದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ, ಅದಕ್ಕೆ ಅರ್ಹಾನ್ ಕೂಡ ಅಸಮಾಧಾನ ಹೊರಹಾಕಿ ಭಾರೀ ಸುದ್ದಿಯಾಗಿದೆ.
ಇಷ್ಟೆಲ್ಲಾ ಆದ್ಮೇಲೆ ಯಾರೀ ಅರ್ಹಾನ್ ಅಂತ ಹುಡುಕ್ತಾ ಹೋದ್ರೆ, ಈತನಿಗೂ ಬಾಲಿವುಡ್​​ಗೂ ನಂಟಿರೋದು ಗೊತ್ತಾಗಿದೆ. ಅದೂ ಅಂತಿಂಥ ನಂಟಲ್ಲ, ಬಾಲಿವುಡ್​ನ ಬಾದ್​ಶಾ, ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ಅರ್ಹಾನ್ ಌಕ್ಟ್ ಮಾಡಿದ್ದಾನೆ. 1996ರಲ್ಲಿ ಶಾರೂಖ್​ ಹಾಗೂ ಮಾಧುರಿ ದೀಕ್ಷಿತ್​ ಅಭಿನಯಿಸಿದ್ದ ‘ಇಂಗ್ಲೀಷ್​ ಬಾಬೂ ದೇಸಿ ಮೇಮ್​’ ಚಿತ್ರದಲ್ಲಿ ಸನ್ನಿ ಸಿಂಗ್ ಎನ್ನುವ ಬಾಲಕನ ಪಾತ್ರದಲ್ಲಿ ಅರ್ಹಾನ್ ಕಾಣಿಸಿಕೊಂಡಿದ್ದ. ಶಾರುಖ್ ಜೊತೆ ಇರುವ ಫೋಟೋವನ್ನ ಅರ್ಹಾನ್ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಕೂಡ ಮಾಡಿದ್ದಾನೆ. ಇದಾದ್ಮೇಲೆ ಶಾಹಿದ್ ಕಪೂರ್ ಜೊತೆ 2010ರಲ್ಲಿ ಪಾಠಶಾಲಾ ಫಿಲ್ಮ್​ನಲ್ಲೂ ಅರ್ಹಾನ್ ಌಕ್ಟ್ ಮಾಡಿದ್ದ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv