ಬಿಜೆಪಿ ಶಾಸಕ ರೇಣುಕಾಚಾರ್ಯ-ರೈತನ ಮಧ್ಯೆ ವಾದ: ವಿಡಿಯೋ ವೈರಲ್

ದಾವಣಗೆರೆ: ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಹಾಗೂ ರೈತರೊಬ್ಬರ ಮಧ್ಯೆ ಅನ್ನ ಭಾಗ್ಯದ ಕುರಿತಂತೆ ವಾದ ನಡೆದಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಬೇಲಿಮಲ್ಲೂರು ಗ್ರಾಮದಲ್ಲಿ  ರೈತ ಹಾಗೂ ಶಾಸಕ ರೇಣುಕಾಚಾರ್ಯ ನಡುವೆ ವಾದ ನಡೆದಿದೆ. ಈ ವೇಳೆ, ಬಿಜೆಪಿ ಶಾಸಕ ರೇಣುಕಾಚಾರ್ಯ ಮುಂದೆ ರೈತರೊಬ್ಬರು ಸಿದ್ದರಾಮಯ್ಯನವರ ಗುಣಗಾನ ಮಾಡಿದ್ದಾರೆ.  ಸಿದ್ದರಾಮಯ್ಯ ಅನ್ನಭಾಗ್ಯ ತಂದು ಉಪಕಾರ ಮಾಡಿದ್ರು, ನಾನು ಅನ್ನ ಕೊಡುತ್ತೇನೆ. ನೀವು ದುಡಿದು ತಿನ್ನಿ ಎಂದು ಸಿದ್ದರಾಮಯ್ಯ ಹೇಳಿದ್ರು ಎಂದು ರೈತ ರೇಣುಕಾಚಾರ್ಯ ಮುಂದೆ ವಾದ ಮಾಡಿದ್ದಾನೆ. ಈ ವೇಳೆ ರೈತನ ವಾದ ಕಂಡು ಶಾಸಕ ರೇಣುಕಾಚಾರ್ಯ ಸುಸ್ತಾಗಿ ಹೋದರು.

ಕ್ಷೇತ್ರದ ಜನರಿಗೆ ಮನೆ ಕಟ್ಟಲು ಕಡಿಮೆ ದರದಲ್ಲಿ ಮರಳು ಸಿಗ್ತಾ ಇಲ್ಲ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂಪಿ ರೇಣುಕಾಚಾರ್ಯ ತಮ್ಮ ಕ್ಷೇತ್ರದ ಜನರಿಗೆ ಮರಳು ವಿತರಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದರು. ಈ ವೇಳೆ ರೈತ ಹಾಗೂ ಶಾಸಕರ ಮಧ್ಯೆ ವಾದ ಏರ್ಪಟ್ಟಿದೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv