ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ಬಿ.ಎನ್ ಕೃಷ್ಣಯ್ಯ ನೇಮಕ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ  B.N. ಕೃಷ್ಣಯ್ಯ ನೇಮಕವಾಗಿದ್ದಾರೆ. ನಿವೃತ್ತ ಅಧಿಕಾರಿಯನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ಸಿಎಂ ನೇಮಿಸಿದ್ದಾರೆ. ಈ ಹಿಂದೆ ಎಚ್‌ಡಿಕೆ ಸಿಎಂ ಆಗಿದ್ದಾಗ ಕೃಷ್ಣಯ್ಯ ಕಾರ್ಯರ್ಶಿಯಾಗಿದ್ದರು. ಬಿ.ಎನ್.ಕೃಷ್ಣಯ್ಯ ಎಚ್.ಡಿ.ದೇವೇಗೌಡರಿಗೆ ಪರಮಾಪ್ತ ಅಧಿಕಾರಿಯಾಗಿದ್ದರು. ಈ ಹಿನ್ನೆಲೆ ನಿವೃತ್ತ ಐಎಎಸ್ ಅಧಿಕಾರಿಗೆ ಈಗ ಮತ್ತೊಮ್ಮೆ ಸಿಎಂ ವಿಶೇಷಾಧಿಕಾರಿಯಾಗಿ ಸ್ಥಾನ ದೊರತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv