ಕಾರ್​ ಸ್ಟೆಪ್ನಿಯಲ್ಲಿ ಕೋಟ್ಯಂತರ ಹಣ ಪತ್ತೆ, ಐಟಿ ಅಧಿಕಾರಿಗಳಿಂದ ಅಪ್ಪಾಜಿಗೌಡ ವಿಚಾರಣೆ

ಶಿವಮೊಗ್ಗ: ಕಾರಿನ ಸ್ಟೆಪ್ನಿ ಟೈರ್​ನಲ್ಲಿ 2.30 ಕೋಟಿ ಹಣ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಶಾಸಕ ಅಪ್ಪಾಜಿಗೌಡರಿಂದ ಐಟಿ ಅಧಿಕಾರಿಗಳು ಮಾಹಿತಿ ಪಡೆದರು.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು, ಭಾನುವಾರ ಅಪ್ಪಾಜಿಗೌಡರನ್ನ ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ್ದರು, ಆಗ ಅಪ್ಪಾಜಿಗೌಡ ಹಣ ನನ್ನದೇ, ನಿವೇಶನ ಮಾರಾಟ ಮಾಡಿದ್ದ ಹಣ ಎಂದು ತಿಳಿಸಿದ್ದರು. ಇದೀಗ ಐಟಿ ಅಧಿಕಾರಿಗಳು, ಅಪ್ಪಾಜಿಗೌಡರನ್ನ ಹೆಚ್ಚಿನ ವಿಚಾರಣೆಗೆ ಮತ್ತೊಮ್ಮೆ ಹಾಜರಾಗುವಂತೆ ನೋಟಿಸ್​ ನೀಡಿದ್ದಾರೆ. ನೋಟಿಸ್​ಗೆ ಪ್ರತಿಕ್ರಿಯಿಸಿರುವ ಅಪ್ಪಾಜಿಗೌಡ,  ವಿಚಾರಣೆಗೆ  ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೇಳಿದ್ದಾರೆ. ಅವರು ನಾಳೆ ಅಥವಾ  ನಾಡಿದ್ದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಕಾರಿನ ಸ್ಟೆಪ್ನಿಯಲ್ಲಿ 2.30 ಕೋಟಿ ಹಣ ಸಾಗಿಸುತ್ತಿದ್ದ ಚಾಲಕನನ್ನ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆತ ಹಣವನ್ನ ಅಪ್ಪಾಜಿಗೌಡರಿಗೆ ತಲುಪಿಸಲು ತೆಗೆದುಕೊಂಡುಹೋಗುತ್ತಿದ್ದೆ ಎಂದು ತಿಳಿಸಿದ್ದಾಗಿ ಹೇಳಲಾಗುತ್ತಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv