ಡಾ.ರಾಜ್​ಕುಮಾರ್ ಟ್ರಸ್ಟ್​ ವತಿಯಿಂದ ‘ಅಪ್ಪಾಜಿ ಸೌಹಾರ್ದ ಪ್ರಶಸ್ತಿ’ ಪ್ರದಾನ

ಬೆಂಗಳೂರು: ಪಾರ್ವತಮ್ಮ ರಾಜ್ ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಡಾ.ರಾಜ್​ಕುಮಾರ್ ಟ್ರಸ್ಟ್ ವತಿಯಿಂದ ಇಂದು ‘ಅಪ್ಪಾಜಿ ಸೌಹಾರ್ದ ಪ್ರಶಸ್ತಿ’ ಸಮಾರಂಭ ಏರ್ಪಡಿಲಾಗಿತ್ತು. ಈ ಕಾರ್ಯಕ್ರಮದಲ್ಲಿ 9 ಮಂದಿಗೆ ಸೌಹಾರ್ದ ಪ್ರಶಸ್ತಿ ಪ್ರದಾನ ಮಾಡಲಾಯ್ತು.

ಕಳೆದ 3 ವರ್ಷಗಳಿಂದ ‘ಅಪ್ಪಾಜಿ ಸೌಹಾರ್ದ ಪ್ರಶಸ್ತಿ’ಯನ್ನು ಪ್ರದಾನ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ 3 ವರ್ಷಗಳ ಸೌಹಾರ್ದ ಪ್ರಶಸ್ತಿಯನ್ನು ನೀಡಲಾಗಿದೆ. 2016ನೇ ಸಾಲಿನಲ್ಲಿ ನಟಿ ಜಯಂತಿ, ನಿರ್ದೇಶಕ ವಿಜಯ ರೆಡ್ಡಿ, ಸಂಗೀತ ನಿರ್ದೇಶಕ ರಾಜನ್​ ನಾಗೇಂದ್ರ ಅವರಿಗೆ. 2017ನೇ ಸಾಲಿನಲ್ಲಿ ನಟ ಲೋಕನಾಥ್​, ಗುಬ್ಬಿ ಡ್ರಾಮ ಕಂಪನಿಯ ನಟ, ನಿರ್ದೇಶಕ ಸಾಹಿತಿ ಶಿವ ಶಂಕರ್​ ಹಾಗೂ ನಟ ರಾಜೇಶ್​ ಅವರಿಗೆ. ಹಾಗೂ 2018ನೇ ಸಾಲಿನಲ್ಲಿ ನಟಿ ಬಿ. ಜಯಾ, ನಟ ಎಂ.ಎಸ್​ ಉಮೆಶ್​, ಸಂಕಲನಕಾರ ಎಸ್​ ಮನೋಹರ್​ಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಸಮಾರಂಭದಲ್ಲಿ ನಟ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಭಾಗಿಯಾಗಿದ್ರು.