ಕಾಶ್ಮೀರದಲ್ಲಿ ಯಾರೇ ಗನ್​​ ಹಿಡಿದರೂ ನಿರ್ನಾಮ ಮಾಡ್ತೀವಿ: ಸೇನೆಯ ಖಡಕ್​​ ಎಚ್ಚರಿಕೆ

ಶ್ರೀನಗರ: ಕಾಶ್ಮೀರದಲ್ಲಿ ಯಾರೇ ಉಗ್ರ ಸಂಘಟನೆಗೆ ಸೇರಿದ್ರೂ ಅವರನ್ನ ಹತ್ಯೆ ಮಾಡಿ ನಿರ್ನಾಮ ಮಾಡ್ತೀವಿ ಅಂತ ಭಾರತೀಯ ಸೇನೆ ಖಡಕ್​ ಎಚ್ಚರಿಕೆ ನೀಡಿದೆ. ನಿನ್ನೆ ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ನಡೆಸ ಎನ್​​ಕೌಂಟರ್​ ಸಂಬಂಧ ಇಂದು ಸೇನೆ, ಸಿಆರ್​​ಪಿಎಫ್ ಹಾಗೂ ಜಮ್ಮು ಕಾಶ್ಮೀರ​​ ಪೊಲೀಸರು ಶ್ರೀನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು.

ಈ ವೇಳೆ ಮಾತನಾಡಿದ ಚಿನಾರ್​ ಕಾರ್ಪ್ಸ್​​ನ ಕಾರ್ಪ್ಸ್​​ ಕಮಾಂಡರ್​ ಕನ್ವಲ್​​ಜೀತ್​ ಸಿಂಗ್​ ಧಿಲ್ಲೋನ್​​​, ಕಾಶ್ಮೀರದ ಯುವಜನತೆಯ ತಾಯಂದಿರಿಗೆ ನಾನು ಮನವಿ ಮಾಡ್ತಿನಿ. ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಎಲ್ಲಾ ಯುವಕರ ತಾಯಂದಿರು ತಮ್ಮ ಮಕ್ಕಳಿಗೆ ಶರಣಾಗುವಂತೆ ಹೇಳಿ. ಇಲ್ಲವಾದ್ರೆ ಬಂದೂಕು ಹಿಡಿದ ಪ್ರತಿಯೊಬ್ಬರನ್ನೂ ಹತ್ಯೆ ಮಾಡಿ, ನಿರ್ನಾಮ ಮಾಡುತ್ತೇವೆ  ಎಂದು ಖಡಕ ಎಚ್ಚರಿಕೆ ನೀಡಿದ್ರು.

ನಾವು ಜೈಷ್​ ಎ ಮೊಹಮ್ಮದ್ ಉಗ್ರ ಸಂಘಟನೆಯನ್ನ ಟ್ರ್ಯಾಕ್ ಮಾಡುತ್ತಿದ್ದೆವು. ಪಾಕ್​​​ ಉಗ್ರರು ಈ ದಾಳಿ ಹಿಂದಿದ್ದಾರೆ.  100 ಗಂಟೆಯೊಳಗೆ ನಾವು ಕಾರ್ಯಾಚರಣೆ ಯಶಸ್ವಿಯಾಗಿ ಮುಗಿಸಿದ್ದೇವೆ. ಸಿಆರ್​ಪಿಎಫ್​​,​ ಜಮ್ಮ ಕಾಶ್ಮೀರ ಪೊಲೀಸ್ ಹಾಗೂ ಭದ್ರತಾ ಪಡೆ  ಜಂಟಿಯಾಗಿ ಈ ಕಾರ್ಯಾಚರಣೆ ಯಶಸ್ವಿಯಾಗಿಸಿದೆ. ನೋವಿನಿಂದ ಹಾಗೂ ಎದೆಯಲ್ಲಿ ಹಮ್ಮೆಯ ಭಾವದೊಂದಿಗೆ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು.