ಅನುಷ್ಕಾರಂಥ ಹೆಂಡ್ತಿ ಸಿಗಬೇಕಾದರೆ ಪುಣ್ಯ ಮಾಡಿರಬೇಕು..!

ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ಸತತ ಆರು ಸೋಲುಗಳ ನಂತರ ನಿನ್ನೆ ಮೊದಲ ಜಯ ದಾಖಲಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಎಂಟು ವಿಕೆಟ್​ಗಳಿಂದ ಗೆಲುವಿನ ಬಾವುಟ ಹಾರಿಸಿದೆ.ಈ ಗೆಲುವಿನಿಂದ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಫುಲ್ ಖುಷ್​ ಆಗಿದ್ದಾರೆ.ಇದೇ ವೇಳೆ ಸೋಲಿನ ಸಮಯದಲ್ಲಿ ತನ್ನ ಜೊತೆಗೆ ನಿಂತು ಪ್ರೋತ್ಸಾಹಿಸಿದ ಪತ್ನಿ ಅನುಷ್ಕಾ ಶರ್ಮಾರನ್ನ ನೆನಪಿಸಿಕೊಂಡಿದ್ದಾರೆ. ಅನುಷ್ಕಾ ನನ್ನ ಪತ್ನಿಯಾಗಿರುವುದು ನನ್ನ ಅದೃಷ್ಟ.ನಾನು  ಕಠಿಣ ಪರಿಸ್ಥಿತಿಯಲ್ಲಿದ್ದಾಗ ನನ್ನ ಹೆಂಡತಿ ನನ್ನ ಜೊತೆಗೆ ನಿಂತಿದ್ದಾಳೆ.ನನ್ನ ತಾಯಿಯಂತೆ ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದ್ದಾಳೆ. ಮದುವೆಯಾದ ಮೇಲೆ ನನ್ನ ಜೀವನ ಮೊದಲಿಗಿಂತ ಸುಂದರವಾಗಿದೆ.ಅನುಷ್ಕಾರಂಥ ವ್ಯಕ್ತಿ ಜೊತೆಗಿದ್ರೆ,ಯಾರಿಗೆ ಆಗಲಿ ಕಲ್ಲುಬಂಡೆಯಂತ ಸಮಸ್ಯೆಯನ್ನ ಎದುರಿಸುವ ಆತ್ಮವಿಶ್ವಾಸ ಮೂಡುತ್ತೆ.ನನ್ನ ಅಮೂಲ್ಯ ಸಮಯವನ್ನ ಅನುಷ್ಕಾ ಜೊತೆಗೆ ಕಳೆಯಲು ಇಚ್ಛಿಸುತ್ತೇನೆ ಎಂದು ಕೊಹ್ಲಿ ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.