ಬೆಂಡೆಕಾಯಿ ಚಿಹ್ನೆಯಡಿ ಅನುಪಮಾ ಶೆಣೈ ಸ್ಪರ್ಧೆ

ಉಡುಪಿ: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ, ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದು ಬಹಳ ಸುದ್ದಿ ಮಾಡಿತ್ತು. ಈಗ ಇದಕ್ಕೆ ಪೂರಕ ಎಂಬಂತೆ ಇಂದು ತಮ್ಮ ಕ್ಷೇತ್ರ ಹಾಗೂ ಚಿಹ್ನೆ ಘೋಷಣೆ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅನುಪಮಾ ಶೆಣೈ, ಉಡುಪಿಯ ಕಾಪು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಹಾಗೂ ತಮ್ಮ ಪಕ್ಷ ಭಾರತೀಯ ಜನಶಕ್ತಿ ಕಾಂಗ್ರೆಸ್ ಚಿಹ್ನೆಯಾಗಿ ಬೆಂಡೆಕಾಯಿಯನ್ನು ಬಳಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಡಿವೈಎಸ್ಪಿ ಹುದ್ದೆಗೆ ರಾಜಿನಾಮೆ ಕೊಟ್ಟಾಗ ನಾನು ಬಿಜೆಪಿ ಎಂದು ಬಿಂಬಿಸಲಾಗಿತ್ತು. ಆದರೇ ನಿಜವಾಗಲೂ ನಾನು ಬಿಜೆಪಿ ಅಲ್ಲ. ನನಗೆ ಕಾಂಗ್ರೆಸ್, ಬಿಜೆಪಿ ಸಮಾನ ವೈರಿಗಳು ಎಂದಿದ್ದಾರೆ. ಮೋದಿನ ಟೀಕೆ ಮಾಡಿದರೆ, ಅವರ ಬೆಂಬಲಿಗರು ಕೆರಳುತ್ತಾರೆ. ಅದರಿಂದ ನನ್ನ ಜನಪ್ರಿಯತೆ ಹೆಚ್ಚಾಗಿ ವೋಟ್ ಬ್ಯಾಂಕ್ ಮಾಡಬಹುದು ಎಂಬ ಉದ್ದೇಶ ನನಗಿಲ್ಲ ಎಂದರು.

Leave a Reply

Your email address will not be published. Required fields are marked *