ಶಿವಣ್ಣಗೆ ಌಕ್ಷನ್ ಕಟ್ ಹೇಳ್ತಾರಾ ಅನೂಪ್ ಭಂಡಾರಿ..?

‘ಸೆಂಚುರಿ ಸ್ಟಾರ್’ ಶಿವರಾಜ್​ಕುಮಾರ್. ಸ್ಯಾಂಡಲ್​ವುಡ್ ಎನರ್ಜಿ ಬೂಸ್ಟರ್ ಎಂತಹ ಪಾತ್ರವಾದ್ರೂ ಜೀವ ತುಂಬುವ ನಟನಾ ಚತುರ. ಇತ್ತೀಚಿನ ಯಂಗ್ ಜನರೇಷ್​ನ್​ ನಟರಿಗೂ ಸಖತ್ ಪೈಪೋಟಿ ನೀಡೋ ಶಿವಣ್ಣನ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳು ಸೆಟ್ಟೇರಿವೆ. ಆನಂದ್​, ದ್ರೋಣ, ರುಸ್ತುಂ ಸೇರಿದಂತೆ, ಬಹುತೇಕ ಸಿನಿಮಾಗಳು ಧಮಾಕ ಸೃಷ್ಟಿಸೋಕೆ ರೆಡಿಯಾಗ್ತಿವೆ. ಇದೀಗ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳೋಕೆ ರಂಗಿತರಂಗ ಖ್ಯಾತಿಯ ಅನೂಪ ಭಂಡಾರಿ ಸಜ್ಜಾಗಿದ್ದಾರೆ.

ಅನೂಪ್​ ಜೊತೆ ಶಿವಣ್ಣ..!
ರಂಗಿತರಂಗ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹೊಸ ಇತಿಹಾಸ ಬರೆದಿದ್ದ ಅನೂಪ್ ಬಳಿಕ ಯಾವುದೇ ಚಿತ್ರ ನಿರ್ದೇಶನಕ್ಕೂ ಮುಂದಾಗಿರಲಿಲ್ಲ. ಇತ್ತೀಚಿಗಷ್ಟೇ ಸುದೀಪ್ ಹೋಮ್ ಬ್ಯಾನರ್​ನಲ್ಲಿ ‘ಬಿಲ್ಲಾ, ರಂಗ, ಭಾಷಾ’ ಅನ್ನೋ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡೋದಾಗಿ ಹೇಳಿದ್ರು. ಈ ಚಿತ್ರಕ್ಕಾಗಿ ಸಕಲ ತಯಾರಿಗಳು ನಡೆದಿವೆ. ಅಕಸ್ಮಾತ್ ಈ ಚಿತ್ರ ಟೇಕ್ ಆಫ್ ಆಗೋದು ಲೇಟ್ ಆದ್ರೆ. ಅನೂಪ್ ಶಿವಣ್ಣನ ಜೊತೆಯಲ್ಲಿ ಹೊಸ ಸಿನಿಮಾ ಮಾಡೋ ಸಾಧ್ಯತೆ ಇದೆ. ಈಗಾಗಲೇ ಶಿವಣ್ಣನನ್ನು ಹೊಸ ಗೆಟಪ್​ನಲ್ಲಿ ತರೋಕೆ ಹೊಸ ಕಥೆ ಚಿತ್ರಕತೆಯೊಂದಿಗೆ ಭರ್ಜರಿ ಪ್ಲಾನ್ ನಡೆದಿದ್ದು ಮಾತುಕತೆ ನಡೆಯಬೇಕಿದೆ. ಸದ್ಯ ಶಿವಣ್ಣ ಪಿ.ವಾಸು ನಿರ್ದೇಶನದ ಆನಂದ್​ ಚಿತ್ರದಲ್ಲಿ ಬ್ಯುಸಿಯಾಗಿದ್ದು ಇದಾದ ಬಳಿಕ ಯೋಗರಾಜ್ ಭಟ್ರ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ. ಈ ಎಲ್ಲಾ ಚಿತ್ರಗಳ ನಂತರ ಅನೂಪ್ ಹಾಗೂ ಶಿವಣ್ಣನ ಜೋಡಿ ಒಂದಾಗಲಿದೆ.

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv