ಅತಿಯಾದ ಆ್ಯಂಟಿಬಯೋಟಿಕ್ಸ್​ನಿಂದ ಮಕ್ಕಳ ಕಿಡ್ನಿಗೆ ಕಾದಿದೆ ಕಂಟಕ

ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಮಕ್ಕಳು ಆಂಟಿಬಯೋಟಿಕ್​ ಮಾತ್ರೆಗಳನ್ನು ಸೇವಿಸುವುದ್ರಿಂದ, ಕಿಡ್ನಿಲಿ ಸ್ಟೋನ್​ ಆಗುತ್ತೆ ಅನ್ನುವ ಸತ್ಯಾಂಶ ಹೊರಬಿದ್ದಿದೆ. ಮೆಡಿಸಿನ್​ಗಳಿಂದ ಆರೋಗ್ಯ ಸರಿಯಾಗುತ್ತೆ ಅನ್ನೊದನ್ನ ಕೇಳಿದ್ವಿ, ಆದ್ರೆ ಮೆಡಿಸಿನ್​ನಿಂದ ಆಪತ್ತುಗಳು ಇವೆ.
ಕಳೆದ 30 ವರ್ಷದಿಂದ ನಮ್ಮ ದೇಶದಲ್ಲಿ 70% ಕಿಡ್ನಿ ಸಮಸ್ಯೆ, ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕಿಡ್ನಿ ಸ್ಟೋನ್​ ಸಮಸ್ಯೆ ಕಂಡು ಬಂದಿರೋದು ರೇರ್​ ಅಂತಾರೆ ಫಿಲಿಡೆಲ್ಫಿಯಾ ಮಕ್ಕಳ ಆಸ್ಪತ್ರೆಯ, ಸ್ಟಡಿ ಲೀಡರ್​ ಗ್ರೆಗೊರಿ ಇ.ಟೇಶಿಯನ್​.
ಕಿಡ್ನಿಯಲ್ಲಿ ಸ್ಟೋನ್​ ಸಮಸ್ಯೆಗಳು ಹೇಗೆ ಹೆಚ್ಚಾದವು ಅನ್ನುವುದಕ್ಕೆ ಕಾರಣ ತಿಳಿದುಬಂದಿಲ್ಲ. ನಮ್ಮ ಅಧ್ಯಯನದ ಪ್ರಕಾರ, ವಯಸ್ಕರಿಗೆ ಹೋಲಿಸಿದ್ರೆ, ಹೆಚ್ಚು ಆ್ಯಂಟಿಬಯೋಟಿಕ್ಸ್​ ನೀಡಿದ ಮಕ್ಕಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಗಳು ಕಂಡುಬಂದಿದೆ ಅಂತಾರೆ ಅಧ್ಯಾಪಕ ಮೈ ಕೆಲ್​ ಡೆನ್​ಬರ್ಗ್​.
ಯುನೈಟೆಡ್​ ಕಿಂಗ್​ಡಂ​ನ ಎಲೆಕ್ಟ್ರಾನಿಕ್​ ಆರೋಗ್ಯ ದಾಖಲೆಗಳ ಮೇಲೆ ಕಣ್ಣು ಹಾಯಿಸಿದ ಅಧ್ಯಯನಕಾರರ ತಂಡದ ಗಮನಕ್ಕೆ ಬಂದದ್ದು, 1994 ಮತ್ತು 2015ರ ನಡುವಿನ ಹೆಲ್ತ್​ ಇಂಪ್ರೂವ್​ಮೆಂಟ್​ನಲ್ಲಿ ವೈದ್ಯರು ನೋಡಿದ 13 ಮಿಲಿಯನ್​ ಕೇಸ್​ಗಳು, ವಯಸ್ಕರು ಮತ್ತು ಮಕ್ಕಳನ್ನೆ ಒಳಗೊಂಡಿದೆ. ಸ್ಟಡಿ ಟೀಮ್​ ಪಡೆದ ಮಾಹಿತಿ ಪ್ರಕಾರ ಆಂಟಿಬಯೋಟಿಕ್​ ಮಾತ್ರೆಗಳನ್ನು 26 ಸಾವಿರ ಕಿಡ್ನಿ ಸ್ಟೋನ್​ ಪೇಶಂಟ್​ಗಳಿಗೆ ನೀಡಲಾಗಿದೆ ಎನ್ನುವುದು ಸಾಬೀತಾಗಿದೆ.
ಕಿಡ್ನಿ ಕಂಟಕ ಓರಾಲ್ ಸಲ್ಫಾ ಮೆಡಿಸನ್​

 

ಕಿಡ್ನಿ ಸ್ಟೋನ್​ಗೆ ಸಂಬಂಧಿಸದ ಸಮಸ್ಯೆಗಳನ್ನು ವೈದ್ಯರು, 5 ಹಂತಗಳಲ್ಲಿ ವಿಂಗಡಿಸಿದ್ದಾರೆ. ಓರಲ್​ ಸಲ್ಫಾಸ್​, ಸೆಫಲೊಸ್ಫೊರಿನ್ಸ್​, ಫ್ಲೊರೊಕ್ವಿನೊಲೊನ್ಸ್​, ನೈಟ್ರೊಪ್ಯುರೆಂಟೈನ್​ ಮತ್ತು ಬ್ರಾಡ್​ ಸ್ಪೆಕ್ಟ್ರಂ ಪೆನಿಕಿಲ್ಲಿನ್ಸ್​. ವಯಸ್ಸು, ಲಿಂಗ, ಇತರೆ ಔಷಧಿಗಳು, ಇತರೆ ವೈದ್ಯಕೀಯ ಸ್ಥಿತಿಗತಿಗಳ ಹೊಂದಾಣಿಕೆಯ ನಂತರ ಓರಲ್​ ಸಲ್ಫಾ ಮೆಡಿಸಿನ್​ಗಳನ್ನು ತೆಗೆದುಕೊಳ್ಳುತ್ತಿರುವ ರೋಗಿಗಳಿಗೆ ಕಿಡ್ನಿಲಿ ಕಲ್ಲಾಗುವ ಸಾಧ್ಯತೆ ಎರಡು ಪಟ್ಟು ಜಾಸ್ತಿ. ಇನ್ನೂ ಬ್ರಾಡ್​-ಸ್ಪೆಕ್ಟ್ರಂ ಪೆನಿಕಿಲ್ಲಿನ್ಸ್​ ಕ್ಲಾಸ್​ನಲ್ಲಿ ರಿಸ್ಕ್ 27% ಅಧಿಕವಾಗಿರುತ್ತೆ.
ಕಿಡ್ನಿ ಸ್ಟೋನ್​ ಸಮಸ್ಯೆಗಳು ಹೆಚ್ಚಾಗಿ ಮಕ್ಕಳು ಮತ್ತು ವಯಸ್ಕರಲ್ಲಿ ಕಂಡುಬರುತ್ತದೆ. ಈಗ ಈ ಸಮಸ್ಯೆ ಕಡಿಮೆಯಾಗಿದೆ ಆದ್ರೂ, ಆ್ಯಂಟಿಬಯೋಟಿಕ್​ ಟ್ಯಾಬ್ಲೆಟ್ಸ್​ ಸೇವನೆ ಪರಿಣಾಮವಾಗಿ ಹಲವು ವರ್ಷಗಳಿಂದ ಸಮಸ್ಯೆ ಉಲ್ಬಣಿಸಿದೆ. ಸೂಕ್ಷ್ಮಾಣುಜೀವಿಗಳ ಇಡೀ ಸಮುದಾಯ ಮಾನವನ ದೇಹದಲ್ಲಿದ್ದು, ಅದು ಈ ಮೈಕ್ರೊಆರ್ಗನ್ಸ್​ಗಳ ಸಮುದಾಯವನ್ನೇ ಮಾರ್ಪಡಿಸುತ್ತೆ ಅನ್ನೋದು ವಿಜ್ಞಾನಿಗಳಿಗೆ ಗೊತ್ತಿತ್ತು. ಕರುಳು ಮತ್ತು ಮೂತ್ರಪಿಂಡದಲ್ಲಿರುವ ಸೂಕ್ಷ್ಮಾಣು ಜೀವಿಗಳು ಕಿಡ್ನಿಯಲ್ಲಿ ಕಲ್ಲುಗಳು ಹೆಚ್ಚಾಗಲು ಕಾರಣವಾಗುತ್ತವೆ. ಆದರೆ ಈ ಹಿಂದಿನ ಯಾವ ಅಧ್ಯಯನವೂ ಸ್ಟೋನ್​ ಮತ್ತು ಆ್ಯಂಟಿಬಯೋಟಿಕ್​ ನಡುವೆ ಇರುವ ಸಂಬಂಧವನ್ನು ಬಹಿರಂಗಪಡಿಸಿಲ್ಲ.

ಮಕ್ಕಳೇ ಹೆಚ್ಚಾಗಿ ಸೇವಿಸುತ್ತಿದ್ದಾರೆ ಆ್ಯಂಟಿಬಯೋಟಿಕ್..!

ವೈದ್ಯರು ಔಷಧೀಯ ಗುಣದಲ್ಲಿ ಎಲ್ಲಾ ರೋಗಿಗಳಿಗೂ ಆ್ಯಂಟಿಬಯೋಟಿಕ್​ ಮಾತ್ರೆಗಳನ್ನು ನೀಡುತ್ತಿದ್ದಾರೆ ಅನ್ನುವುದನ್ನು ಅಧ್ಯಯನಕಾರರು ಕಂಡುಹಿಡಿದ್ರು. ಅದರಲ್ಲೂ ವಯಸ್ಕರಿಗೆ ಹೊಲಿಸಿದ್ರೆ ಈ ಮಾತ್ರೆಗಳನ್ನು ಮಕ್ಕಳಿಗೆ ಹೆಚ್ಚಾಗಿ ನೀಡಲಾಗ್ತಿದೆ ಅನ್ನೊದು ಕಂಡು ಬಂತು. ಆದಷ್ಟೂ ಆ್ಯಂಟಿಬಯೋಟಿಕ್ ನೀಡುವುದನ್ನ ಕಡಿಮೆಗೊಳಿಸಿ ಅಂತಾ ಸಜೆಸ್ಟ್​ ಮಾಡಿದ್ದಾರೆ. ಈ ಮಾತ್ರೆಗಳನ್ನು ಉಪಯೋಗಿಸುವುದ್ರಿಂದ ಒಳಿತಿಗಿಂತ ಕೆಡುಕೆ ಜಾಸ್ತಿ. ರೋಗಿಗಳಿಗೆ ಔಷಧಿಗಳ ವಿಧಾನಗಳನ್ನು ಚೇಂಜ್​ ಮಾಡುವುದ್ರಿಂದ ಮಕ್ಕಳು ಮತ್ತು ವಯಸ್ಕರಲ್ಲಿ ಕಿಡ್ನಿಯಲ್ಲಿ ಸ್ಟೋನ್​ ಆಗುವುದನ್ನು ತಪ್ಪಿಸಬಹುದಾಗಿದೆ ಅಂತಾ ಹೇಳಿದ್ರು.

ವಿಶೇಷ ಬರಹ: ವಿದ್ಯಾ.ಕೆ.ಹೆಚ್​

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕೆ ಸಂಪರ್ಕಿಸಿ: contact@firstnews.tv