ಪಾಕ್ ವಿರುದ್ಧ ಸೈಬರ್ ವಾರ್​, ಅಂಶುಲ್ ಸಕ್ಸೇನಾ ಫೇಸ್​​ಬುಕ್​ ಅಕೌಂಟ್​ ಸಸ್ಪೆಂಡ್​..!

ನವದೆಹಲಿ: ಪುಲ್ವಾಮಾ ದಾಳಿ ನಡೆಸಿ 40 ಸಿಆರ್​ಪಿಎಫ್ ಯೋಧರ ಬಲಿ ಪಡೆದ ಪಾಕಿಸ್ತಾನದ ವಿರುದ್ಧ ಸೈಬರ್​​​ ವಾರ್​​​ ನಡೆಸಿ ಸೇಡು ತೀರಿಸಿಕೊಂಡಿದ್ದ ಅಂಶುಲ್​ ಸೆಕ್ಸೇನಾರ ಫೇಸ್​ಬುಕ್​ ಅಕೌಂಟ್​​ ಅನ್ನ ತಾತ್ಕಾಲಿಕವಾಗಿ ಅಮಾತು ಮಾಡಲಾಗಿದೆ. ಫೇಸ್​ಬುಕ್​ ಸಂಸ್ಥೆ ತಾತ್ಕಾಲಿಕವಾಗಿ ಅವರ ಖಾತೆಯನ್ನ ಸಸ್ಪೆಂಡ್​ ಮಾಡಿದ್ದು, ಈ ಹಿನ್ನೆಲೆಯಲ್ಲಿ ಫೆಬ್ರವರಿ 20ರವೆರೆಗೆ ಯಾವುದೇ ಪೋಸ್ಟ್​ಗಳನ್ನ ಹಾಕುವಂತಿಲ್ಲ. ಪುಲ್ವಾಮಾ ದಾಳಿ ನಡೆದ 72 ಗಂಟೆಯೊಳಗೆ ಭಾರತದ ಹ್ಯಾಕರ್ಸ್​ಗಳ ಟೀಂ ಪಾಕಿಸ್ತಾನದ ಪ್ರಮುಖ ವೆಬ್​ಸೈಟ್​ಗಳ ಮೇಲೆ ಸಮರ ಸಾರಿ 70ಕ್ಕೂ ಹೆಚ್ಚು ಸರ್ಕಾರಿ ವೆಬ್​​ಸೈಟ್​ಗಳನ್ನ ಹ್ಯಾಕ್ ಮಾಡಿ ಹಾಕಿದ್ದರು. ಹ್ಯಾಕ್ ಆದ ವೆಬ್​ಸೈಟ್​ಗಳ ಕ್ಷಣ ಕ್ಷಣದ ಮಾಹಿತಿಯನ್ನ ಅಂಶುಲ್ ಸೆಕ್ಸೇನಾ ತಮ್ಮ ಫೇಸ್​ಬುಕ್ ಹಾಗೂ ಟ್ವಿಟರ್​​ನಲ್ಲಿ ಹಾಕಿಕೊಂಡಿದ್ದರು. ಇದೀಗ ಫೇಸ್​ಬುಕ್​ ಅವರ ಅಕೌಂಟ್​ ಅನ್ನ ತಾತ್ಕಾಲಿಕವಾಗಿ ಸಸ್ಪೆಂಡ್​ ಮಾಡಿದೆ. ಈ ಮಾಹಿತಿಯನ್ನ ಅಂಶುಲ್​ ಸೆಕ್ಸೇನಾ ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv